ಪೀಠಾರೋಹಣ ವರ್ಧಂತಿ: 5ರಂದು ಸಭೆ
ಹಾವೇರಿ: ನಿಜಶರಣ ಅಂಬಿಗರ ಚೌಡಯ್ಯನವರ ಪೀಠದ ವತಿಯಿಂದ ಶಾಂತಮುನಿ ಸ್ವಾಮೀಜಿಯವರ 3ನೇ ವರ್ಷದ ಪೀಠಾರೋಹಣ ಕಾರ್ಯಕ್ರಮ ಕೈಗೊಳ್ಳಲು ಜ. 5ರಂದು ಮಧ್ಯಾಹ್ನ 12 ಗಂಟೆಗೆ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಜ. 29ರಂದು ಸ್ವಾಮೀಜಿ ಪೀಠಾರೋಹಣ ವಾರ್ಷಿಕೋತ್ಸವ ಆಚರಿಸುವ ಕುರಿತು ಸಲಹೆ-ಸೂಚನೆ ನೀಡಲು ಸಭೆಯಲ್ಲಿ ಪಾಲ್ಗೊಳ್ಳುವಂತೆ ಪೀಠದ ಕಾರ್ಯದರ್ಶಿ ಹೊನ್ನಪ್ಪ ಕುದರಿಹಾಳ ತಿಳಿಸಿದ್ದಾರೆ.
ಇಂದು ಜಾತ್ರೆ
ರೋಣ: ತಾಲೂಕಿನ ಹೊಳೆಹಡಗಲಿ ಗ್ರಾಮದ ಚಂದ್ರಮೌಳೇಶ್ವರ ದೇವರ ಜಾತ್ರಾಮಹೋತ್ಸವವು ಜ. 3ರ ಸಂಜೆ 5.30ಗಂಟೆಗೆ ಜರುಗಲಿದೆ. ಬೆಳಗ್ಗೆ 7 ಗಂಟೆಗೆ ಚಂದ್ರಮೌಳೇಶ್ವರ ದೇವರಿಗೆ ವಿಶೇಷ ಪೂಜೆ ಜರುಗಲಿದೆ ಎಂದು ದೇವಸ್ಥಾನದ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.