ಸಲೀಂ ಜನ್ಮದಿನ: ರೋಗಿಗಳಿಗೆ ಹಾಲು-ಹಣ್ಣು
ಹಾನಗಲ್ಲ: ನೆಹರು ಯುವ ಕೇಂದ್ರದ ಮಹಾನಿರ್ದೇಶಕ ಸಲೀಂ ಅಹ್ಮದ್ ಹುಟ್ಟುಹಬ್ಬದ ನಿಮಿತ್ತ ಕಾಂಗ್ರೆಸ್ ಕಾರ್ಯಕರ್ತರು ಹಾನಗಲ್ಲ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದರು.
ಕೆಪಿಸಿಸಿ ಸದಸ್ಯ ರಾಜಶೇಖರ ಸಾಲಿಮಠ, ಹಾವೇರಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಎಂ. ಪಠಾಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಬಡಿಗೇರ, ಪಕ್ಷದ ವಕ್ತಾರ ಕೆ.ಎಲ್. ದೇಶಪಾಂಡೆ, ಎಪಿಎಂಸಿ ನಿರ್ದೇಶಕ ಗುಡ್ಡಪ್ಪ ಗೋಯಿಕಾಯಿ, ಪುರಸಭೆ ಮಾಜಿ ಅಧ್ಯಕ್ಷ ವೈ.ಎಫ್. ಕಿತ್ತೂರ, ರಾಮಣ್ಣ ಮಾಸನಕಟ್ಟಿ, ಡಿ.ಎಂ. ಇನಾಮದಾರ, ಕೇಶವ ಶೇಷಗಿರಿ, ನೂರ್ ಅಹ್ಮದ್ ಅಕ್ಕಿ, ಸಿ.ಎಸ್. ಹಿರೇಮಠ, ಎಸ್.ಸಿ. ಹುಲಿಕಂತಿಮಠ, ಎಂ.ಎಲ್. ಲಾಲಖಾನನವರ, ಎಸ್.ಎಸ್. ಹೇರೂರ, ಸುಭಾಸ ದೊಡ್ಡಕೋವಿ, ಸಿ.ಎಸ್. ವಡ್ಡರ ಉಪಸ್ಥಿತರಿದ್ದರು.