ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

12ರಂದು ಖಾಲಿ ಗಾಡಾ ಓಡಿಸುವ ಸ್ಪರ್ಧೆ

Rashmi Kasaragodu
Updated On : 5 Jan 2014, 1:17 am


ಶಿಗ್ಗಾಂವಿ: ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಯುವಕ ಶಕ್ತಿ ಸಂಘದ ಆಶ್ರಯದಲ್ಲಿ ಹೊಸ ವರ್ಷ ಹಾಗೂ ಮಕರ ಸಂಕ್ರಮಣ ಪ್ರಯುಕ್ತ ಪ್ರ-ಪ್ರಥಮ ಬಾರಿಗೆ ರಾಜ್ಯ ಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆಯನ್ನು ಜ. 12ರಂದು (ಭಾನುವಾರ) ಮುಂಜಾನೆ 9 ಗಂಟೆಗೆ ಶಿವಪ್ಪ ಈರಪ್ಪ ಹರಕೂಣಿ ಅವರ ಹೊಲದಿಂದ ರಾಷ್ಟ್ರೀಯ ಹೆದ್ದಾರಿಯ ವರೆಗೆ ಹಮ್ಮಿಕೊಳ್ಳಲಾಗಿದೆ. ಪ್ರಥಮ ಬಹುಮಾನ 10 ಗ್ರಾಂ ಬಂಗಾರ, ದ್ವಿತೀಯ ಬಹುಮಾನ 1 ಕಬ್ಬಿಣದ ಚಕ್ಕಡಿ, ತೃತೀಯ ಬಹುಮಾನ 200 ಗ್ರಾಂ ಬೆಳ್ಳಿ, ಹಾಗೂ ಇನ್ನೂ ಸುಮಾರು 25 ಬಹುಮಾನಗಳನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣಿಗಾಗಿ ಶರೀಫ ಈಟಿ (ಮೊ. 9972791256), ಕೋಟೆಪ್ಪ ಸಂಜೀವಣ್ಣನವರ (ಮೊ. 8105750207), ಮಾಲತೇಶ ಓಲೇಕಾರ (ಮೊ. 9535063829), ಪ್ರಭು ಭೀಮನವರ (ಮೊ. 9535678252) ಅವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement