ಆಮ್ ಆದ್ಮಿ ಸಭೆ ಇಂದು
ಶಿಗ್ಗಾಂವಿ: ಆಮ್ ಆದ್ಮಿ ಪಕ್ಷದ ಶಿಗ್ಗಾಂವಿ, ಸವಣೂರು ಹಾಗೂ ಶಿರಹಟ್ಟಿ ತಾಲೂಕು ಘಟಕಗಳನ್ನು ಜ. 5ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಆರಂಭಿಸಲಾಗುವುದು ಎಂದು ಜಿಲ್ಲಾ ಸಂಚಾಲಕ ಶಿವಾನಂದ ಹರಳೇವರ ತಿಳಿಸಿದ್ದಾರೆ. ತಾಲೂಕಿನ ಜನತೆ, ವಿದ್ಯಾಥಿಗಳು, ನಾಗರಿಕರು ಸೇರಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೈಜೋಡಿಸಬೇಕು. ಸದಸ್ಯತ್ವ ನೋಂದಣಿಗಾಗಿ ವಿನಯ ಚಿನ್ನಪ್ಪನವರ, ಸಿದ್ಲಿಂಗಯ್ಯ ಹಿರೇಮಠ ಅವರನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.
ಬ್ಯಾಂಕ್ಗಳ ಸಭೆ ನಾಳೆ
ಹಾವೇರಿ: ಬ್ಯಾಂಕುಗಳ ವಾರ್ಷಿಕ ಪ್ರಗತಿ ಪರಿಶೀಲನಾ ಸಭೆಯನ್ನು ಜ. 6ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಆಡಳಿತ ಭವನದಲ್ಲಿ ನಡೆಯಲಿದೆ. ಜಿಪಂ ಸಿಇಒ ಕೆ.ಬಿ. ಆಂಜನಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಸಂಸದ ಶಿವಕುಮಾರ ಉದಾಸಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಜಿಲ್ಲೆಯ ಶಾಸಕರು, ಜಿಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ. ಉಮೇಶಬಾಬು ತಿಳಿಸಿದ್ದಾರೆ.
ಮೋಹನ್ ನಿಧನ
ಶಿಗ್ಗಾಂವಿ: ಕೋಣನಕೇರಿ ಗ್ರಾಮದ ಮರಾಠಾ ಸಮಾಜದ ಮುಖಂಡ, ಎಪಿಎಂಸಿ ಮಾಜಿ ಸದಸ್ಯ ಮೋಹನ ಪ. ಮಾಸನಕಟ್ಟಿ (59) ಶನಿವಾರ ನಿಧನರಾದರು. ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಶಿಗ್ಗಾಂವಿ-ಸವಣೂರು ಶಾಸಕ ಬಸವರಾಜ ಬೊಮ್ಮಾಯಿ, ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಎಪಿಎಂಸಿ ಅಧ್ಯಕ್ಷ ವೀರನಗೌಡ ಪಾಟೀಲ, ಮಾಜಿ ಅಧ್ಯಕ್ಷ ಬಿ.ಎಂ. ಪಾಟೀಲ, ಶಿವಾನಂದ ರಾಮಗೇರಿ ಸಂತಾಪ ಸೂಚಿಸಿದ್ದಾರೆ.