ಆರೋಗ್ಯಕ್ಕೆ ಸಂಗೀತ: ಸುಶೀಲಾ
ಬ್ಯಾಡಗಿ: ಸಂಗೀತ ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡುವ ಮೂಲಕ ಆರೋಗ್ಯಪೂರ್ಣ ಜೀವನಕ್ಕೆ ದಿವ್ಯೌಷಧ ಒದಗಿಸಲಿದೆ ಎಂದು ಸುಶೀಲಾ ಗುಡಗೂರ ಹೇಳಿದರು. ಮೋಟೆಬೆನ್ನೂರಿನಲ್ಲಿ ಹೊಸ ವರ್ಷಾಚರಣೆ ಅಂಗವಾಗಿ ಡಾ. ದೇವದತ್ತ ಗುಡಗೂರ ಸ್ಮರಣಾರ್ಥ ಏರ್ಪಡಿಸಿದ್ದ ಸಾಂಸ್ಕೃತಿಕ ಸಂಜೆಯಲ್ಲಿ ಮಾತನಾಡಿದರು. ನೆಮ್ಮದಿ ಬದುಕಿಗೆ ಸಂಗೀತವೇ ಅಂತಿಮ ಪರಿಹಾರ, ಪ್ರಾಣಿ, ಪಕ್ಷಿಗಳು ಸೇರಿದಂತೆ ಸಕಲ ಜೀವಿಗಳೂ ಸಂಗೀತಕ್ಕೆ ಸ್ಪಂದಿಸುತ್ತವೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ. ಮನುಷ್ಯನಿಗೆ ಮನೋಲ್ಲಾಸ ನೀಡುವ ಸಂಗೀತ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದರು. ಡಾ. ಜೋಸೆಪ್ ಗುಡಗೂರ ಅಧ್ಯಕ್ಷತೆ ವಹಿಸಿದ್ದರು. ಸುಚಿತ್ರಾ ಗುಡಗೂರ, ಸುರೇಶ ಕುಡಪಲಿ, ಪ್ರಮೋದ ಕಾಲ್ಪಲ್, ಪುನೀತ್ ಉಪಸ್ಥಿತರಿದ್ದರು. ಶಾಲಾ ಮಕ್ಕಳ ನೃತ್ಯಪ್ರದರ್ಶನ ಹಾಗೂ ನಾಟಕಗಳು ಜನಮನ ರಂಜಿಸಿದವು.