ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು 'ನಾಯಿ ಭರಮ್ಯಾ' ನಾಟಕ ಪ್ರದರ್ಶನ

Rashmi Kasaragodu
Updated On : 5 Jan 2014, 1:15 am

ಹಾನಗಲ್ಲ: ಡಾ೤ ಬಾಳಾಸಾಹೇಬ ಲೋಕಾಪುರ ಅವರ ಕಥೆಯನ್ನಾಧರಿಸಿ ರಚಿಸಿದ, ಸಾಹಿತಿ ಸತೀಶ ಕುಲಕರ್ಣಿ ಅವರ 'ನಾಯಿ ಭರಮ್ಯಾ' ನಾಟಕ ಜ. 5ರಂದು ಹಾನಗಲ್ಲ ತಾಲೂಕಿನ ರಂಗ ಗ್ರಾಮ ಶೇಷಗಿರಿಯಲ್ಲಿ ಪ್ರದರ್ಶನಗೊಳ್ಳಲಿದೆ. ಭಾನುವಾರ ಸಂಜೆ ಶೇಷಗಿರಿಯ ಸಿ.ಎಂ. ಉದಾಸಿ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚನ್ನಬಸವಜ್ಜರ ವಿದ್ಯಾರ್ಥಿ ಕಲಾ ತಂಡ, ಗಜಾನನ ಯುವಕ ಮಂಡಳದ ಸಹಯೋಗದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಶಿಕ್ಷಕ ಜಿ.ಎಂ. ಓಂಕಾರಣ್ಣನವರ ನಿರ್ದೇಶಿಸಿದ್ದಾರೆ. ಜಿ.ಎಂ. ಅಪ್ಪಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಪ್ರೊ೤ ಮಾರುತಿ ಶಿಡ್ಲಾಪುರ, ಸಾಹಿತಿ ಉದಯ ನಾಸಿಕ, ಗ್ರಾಪಂ ಸದಸ್ಯ ಸುರೇಶ ಗುರ್ಕಿ, ಶಿವಕುಮಾರ ಅಪ್ಪಾಜಿ, ಪಿ.ಎಂ. ನೋಟದ, ಶಂಕ್ರಣ್ಣ ಗುರಪ್ಪನವರ, ವಿ.ಎಂ. ಪತ್ರಿ, ನಾಗರಾಜ ಧಾರೇಶ್ವರ, ಎಸ್.ಆರ್. ಹಿರೇಮಠ, ಸಿದ್ದಪ್ಪ ರೊಟ್ಟಿ, ಆರ್. ಉಮೇಶ, ಜಿ.ಎಂ. ಭೀಮಣ್ಣ, ಅಶೋಕ ಕೊಂಡ್ಲಿ, ಎಂ.ಬಿ. ಒಡೆಯರ್ ಆಗಮಿಸುವರೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಹಾಗೂ ಪ್ರಧಾನ ಸಂಯೋಜಕ ಪ್ರಭು ಗುರಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement