ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಮದೋಡ: 20ರಿಂದ ಲೆಕ್ಕಿಕಟ್ಟಿ ಚೌಡೇಶ್ವರಿ ಜಾತ್ರೆ

Rashmi Kasaragodu
Updated On : 5 Jan 2014, 1:15 am

ರಾಣಿಬೆನ್ನೂರು: ಕಮದೋಡ ಗ್ರಾಮದೇವತೆ ಲೆಕ್ಕಿಕಟ್ಟಿ ಚೌಡೇಶ್ವರಿ ದೇವಿಯ ಜಾತ್ರೋತ್ಸವ ಜ. 20ರಿಂದ 25ರ ವರೆಗೆ ನಡೆಯಲಿದೆ ಎಂದು ಜಾತ್ರೋತ್ಸವ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ. ಜ. 20ರಂದು ಸಂಜೆ 6 ಗಂಟೆಗೆ ಊರಿನ ಮಧ್ಯದಲ್ಲಿರುವ ಬಸವೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಡಲಿದೆ. ಬಾಜಾ, ಭಜಂತ್ರಿ, ಡೊಳ್ಳು, ಕೋಲಾಟ, ಹರಳಯ್ಯ ಕಲಾವಿದರಿಂದ ಹಲಗೆ ವಾದ್ಯ, ಸೇವಾಲಾಲ ಯುವಕ ಸಂಘದ ಕಲಾವಿದರಿಂದ ಭಜನೆ, ಬಸವೇಶ್ವರ ಭಜನಾ ಸಂಘದವರ ಭಜನಾ ಮೇಳದೊಂದಿಗೆ ದೇವಿಯ ಮೂರ್ತಿಯನ್ನು ಸಿಂಗರಿಸಿದ ರಥಯಲ್ಲಿ ರಾತ್ರಿಯಿಡೀ ಮೆರವಣಿಗೆ ಮಾಡಲಾಗುವುದು. ಜ. 21ರಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಐತಿಹಾಸಿಕ ದೊಡ್ಡ ಕೆರೆಯ ದಡದಲ್ಲಿರುವ ದೇವಸ್ಥಾನವನ್ನು ಮೆರವಣಿಗೆ ತಲುಪಲಿದೆ. ಬಳಿಕ ದೇವಿಗೆ ಅಭಿಷೇಕ ನಡೆಸಿ, ಹರಕೆ ಸಲ್ಲಿಸುವ, ಉಡಿ ತುಂಬುವ ಕಾರ್ಯಕ್ರಮ ನಡೆಸಲಾಗುವುದು. 22ರಂದು ಮಧ್ಯಾಹ್ನ ಬೆಲ್ಲದ ಬಂಡಿ, ಎತ್ತಿನ ಮೆರವಣಿಗೆ, ಹೂವಿನ ಹಾರಗಳ ಮೆರವಣಿಗೆ, 23,  24ರಂದು ವಿಷೇಷ ಕಾರ್ಯಕ್ರಮಗಳಿವೆ. ಭಕ್ತಾದಿಗಳಿಗೆ ಜ. 21 ಮತ್ತು 22ರಂದು ಅನ್ನಸಂತರ್ಪಣೆ ಏರ್ಪಡಿಸಿರುವುದಾಗಿ ಸಮಿತಿ ತಿಳಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement