'ದುಶ್ಚಟ ಭಿಕ್ಷೆ, ಸದ್ಗುಣಗಳ ದೀಕ್ಷೆ'
ಹಾನಗಲ್ಲ: ಕೆಲಸ ಮಾಡುವ ಕೈಗಳಿಗೆ ಮಾನ್ಯತೆ ಕೊಡಿ. ಸತ್ಸಮಾಜ ನಿರ್ಮಿಸೋಣ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಹೇಳಿದರು. ಗಡೆಗುಂಡಿ ಯಲ್ಲಾಪುರ ಹಾಗೂ ಹುಲ್ಲತ್ತಿ ಗ್ರಾಮಗಳಲ್ಲಿ 'ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ' ಪಾದಯಾತ್ರೆ, ಧರ್ಮಸಭೆಯಲ್ಲಿ ಮಾತನಾಡಿದರು. ದುಶ್ಚಟಗಳಿಂದ ದೂರವುಳಿಯಲು ನಿರ್ಧರಿಸಿದ 10 ಗ್ರಾಮಸ್ಥರು ಕಾರ್ಯಕ್ರಮ ಉದ್ಘಾಟಿಸಿದರು. ಬಮ್ಮನಹಳ್ಳಿ ವಿರಕ್ತಮಠದ ಶಿವಯೋಗೀಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಗುಳೇದಗುಡ್ಡದ ಒಪ್ಪತ್ತೇಶ್ವರ ಶ್ರೀಗಳು, ಬಿಜಕಲ್ ಶಿವಲಿಂಗೇಶ್ವರ ಶ್ರೀಗಳು, ಹರನಾಳ ಸಂಗನಬಸವ ಮಹಾಸ್ವಾಮಿಗಳು, ಸೊಲ್ಲಾಪುರದ ಪ್ರಭುದೇವರು ಸಮ್ಮುಖ ವಹಿಸಿದ್ದರು.