ಬಿಜೆಪಿಯಲ್ಲೇ ಭವಿಷ್ಯ ಎಂಬ ಅರಿವಾಗಿದೆ: ಜಿ. ಶಿವಣ್ಣ
ರಾಣಿಬೆನ್ನೂರು: ವರ್ಷದಿಂದ ಕೆಜೆಪಿ ಜತೆ ಗುರುತಿಸಿಕೊಂಡಿದ್ದ ನಾವೀಗ ಬಿಜೆಪಿಗೆ ಮರಳುತ್ತಿದ್ದೇವೆ. ಅಲ್ಲೇ ನಮಗೆ ಭವಿಷ್ಯವಿದೆ ಎಂದು ಮಾಜಿ ಶಾಸಕ ಜಿ. ಶಿವಣ್ಣ ಹೇಳಿದರು. ನಗರಸಭೆ ಸದಸ್ಯ ರಾಮಣ್ಣ ಭೀಮಪ್ಪ ಕೋಲಕಾರ ಅವರ ಅಭಿಮಾನಿಗಳು ಚೌಡೇಶ್ವರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ 61ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಸದಸ್ಯ ಶಿವಕುಮಾರ ಮುದ್ದಪ್ಪಳವರ, ನಗರಸಭೆ ಸದಸ್ಯರಾದ ಶೇಖಪ್ಪ ಹೊಸಗೌಡ್ರ, ರವಿ ಮಾಂಡ್ರೆ, ರಾಜು ಅಡ್ಮನಿ, ಹನುಮಂತಪ್ಪ ದೇವರಗುಡ್ಡ, ಬಸನಗೌಡ ಪಾಟೀಲ, ಎಸ್.ಎಸ್. ರಾಮಲಿಂಗಣ್ಣನವರ, ತಾಪಂ ಸದಸ್ಯೆ ರೇಣುಕಾ ಮಲಕನಹಳ್ಳಿ, ಕಿಟ್ಟಿ ಹೂಲಿಹಳ್ಳಿ, ಚೋಳಪ್ಪ ಕಸವಾಳ, ಶಿವಾನಂದ ಸಾಲಗೇರಿ, ಚಳಗೇರಿ ಗ್ರಾಪಂ ಉಪಾಧ್ಯಕ್ಷ ಮಂಜಪ್ಪ ನಾಗೇನಹಳ್ಳಿ, ಬೇಲೂರು ಗ್ರಾಪಂ ಅಧ್ಯಕ್ಷ ಶೇಖಪ್ಪ ಭಾರ್ಕಿ, ಉದ್ಯಮಿ ಚಂದ್ರಣ್ಣ ತಿಳುವಳ್ಳಿ, ಪಾಂಡಪ್ಪ ಅಡ್ಮನಿ, ಬಶೀರ ಅಹ್ಮದ್ ಕರ್ಜಗಿ, ನಸರುಲ್ಲಾ ಮುಲ್ಲಾ, ಫೈರೋಜ್ ಟಿನ್ಮೇಕರ್ ಮಾತನಾಡಿದರು. ದೊಡ್ಡಪೇಟೆ ಪುಟ್ಟಯ್ಯನಮಠದ ಗುರುಬಸವ ಸ್ವಾಮೀಜಿ ಆಶೀರ್ವಚನ ನೀಡಿದರು.