ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವಿಕಾಸ ಜನಶಕ್ತಿ ಯೋಜನೆ ಶೀಘ್ರ ಪ್ರಾರಂಭ

Rashmi Kasaragodu
Updated On : 5 Jan 2014, 1:17 am

ಗದಗ:  ಜನತಾ ಸೇವೆಗಾಗಿ ಸದಾ ಸನ್ನದ್ಧವಾಗಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗ್ರಾಮದ ಜನರ ಆಶೋತ್ತರಗಳನ್ನು ಈಡೇರಿಸುವುದಕ್ಕಾಗಿ ವಿಕಾಸ ಜನಶಕ್ತಿ ಎಂಬ ನೂತನ ಸಾಲ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಅಶೋಕ ರೆಡ್ಡಿ ಹೇಳಿದರು. ಅವರು ಶನಿವಾರ ನಗರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಗದಗ ಪ್ರಾದೇಶಿಕ ಕಚೇರಿಯಲ್ಲಿ ನಡೆದ ಶಾಖಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಗದಗ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಪ್ರಬಂಧಕ ಎ.ಎ. ಉಪಾಧ್ಯೆ ಅವರು ಪ್ರಾದೇಶಿಕ ಕಚೇರಿಯ ವ್ಯವಹಾರದ ಬಗ್ಗೆ ಸಮಗ್ರ ವರದಿಯನ್ನು ನೀಡಿದರು. ಪ್ರಾದೇಶಿಕ ಕಚೇರಿಯ ಹಿರಿಯ ಪ್ರಬಂಧಕ ಎಸ್.ಜಿ. ಹಿರೇಮಠ ಸ್ವಾಗತಿಸಿದರು. ಗಜೇಂದ್ರಗಡ ಶಾಖೆಯ ಹಿರಿಯ ಪ್ರಬಂಧಕ ವಿ.ಆರ್. ತಿಗಡಿಕರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement