ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾರ್ಮಿಕರ ನಿರ್ಲಕ್ಷ್ಯ: ಖಂಡನೆ

Lingaraj Badiger
Updated On : 6 Jan 2014, 12:42 pm

ರಾಣಿಬೆನ್ನೂರು: ನೂರಾರು ವರ್ಷಗಳಿಂದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರನ್ನು ಸರ್ಕಾರ ಹಾಗೂ ಕಾರ್ಮಿಕ ಮಂಡಳಿಗಳು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿವೆ. ಇದರಿಂದ ಕಾರ್ಮಿಕರಿಗೆ ತೊಂದರೆಯಾಗಿದೆ ಎಂದು ಕಟ್ಟಡ ಕಾರ್ಮಿಕರ ರಾಜ್ಯಾಧ್ಯಕ್ಷ ಬಿ.ಎಂ. ನಡುವಿನಕೇರಿ ಆರೋಪಿಸಿದರು.
ಹಾವೇರಿ ಜಿಲ್ಲಾ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮ್ಮ ಪ್ರಾಣದ ಹಂಗು ತೊರೆದು ಕಟ್ಟಡ ಕಟ್ಟುವ, ವೈರಿಂಗ್, ಬಾರ್ ಬೆಂಡಿಂಗ್, ಪೇಂಟಿಂಗ್ ಇತ್ಯಾದಿ ಕೆಲಸಗಳಲ್ಲಿ ತೊಡಗುವ ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ, ಅವುಗಳ ಅನುಷ್ಠಾನದ ಹೊಣೆ ಹೊತ್ತಿರುವ ಕಾರ್ಮಿಕ ಕಲ್ಯಾಣ ಮಂಡಳಿಗಳು ಯೋಜನೆಯ ಲಾಭವನ್ನು ಬಡವರಾಗಿದ್ದು, ದುಡಿದೇ ಹೊಟ್ಟೆ ಹೊರೆಯುವ ಕಾರ್ಮಿಕರಿಗೆ ಮುಟ್ಟಿಸಲು ವಿಫಲವಾಗಿವೆ. ಹೀಗಾಗಿ, ಕಾರ್ಮಿಕರು ಸೌಲಭ್ಯವಂಚಿತರಾಗಿದ್ದಾರೆ ಎಂದು ಆರೋಪಿಸಿದರು.
ಪದಾಧಿಕಾರಿಗಳ ಆಯ್ಕೆ: ಹಾವೇರಿ ತಾಲೂಕು ಶುಭ ಮಂಗಳ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ  ಯೂನಿಯನ್ ಘಟಕದ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ದಿಳ್ಳೆಪ್ಪ ಮಾ. ಅಂಗಡಿ, ಉಪಾಧ್ಯಕ್ಷರಾಗಿ ಮಹ್ಮದ್ ರಫೀಕ್ ಮಿರ್ಜಾನವರ, ಪ್ರಧಾನ ಕಾರ್ಯದರ್ಶಿಯಾಗಿ ಆಸಿಫ್ ಇಕ್ಬಾಲ್ ಎಸ್.ಜಿ., ಖಜಾಂಚಿಯಾಗಿ ಮುಸ್ತಾಕ್ ಎ. ಹಸನಮಲೆ, ಸಂಘಟನಾ ಕಾರ್ಯದರ್ಶಿಗಳಾಗಿ ಮಹ್ಮದ್ ಹನೀಫ್ ಬಿ. ಶಿರಾಳಕೊಪ್ಪ, ಮಂಜಪ್ಪ ಎನ್. ದೇವಗಿರಿ ಅವರನ್ನು ಆಯ್ಕೆ ಮಾಡಿರುವುದಾಗಿ ನಡುವಿನಕೇರಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement