ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ದಕ್ಷಿಣ ಭಾರತ ವಿಜ್ಞಾನವಸ್ತು ಪ್ರದರ್ಶನಕ್ಕೆ ಆಯ್ಕೆ

Lingaraj Badiger
Updated On : 6 Jan 2014, 12:42 pm

ಶಿಗ್ಗಾಂವಿ: ನಾರಾಯಣಪುರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮೀ ಅಣ್ಣಿಗೇರಿ ಹಾಗೂ ರತ್ನಾ ಚಿನ್ನಪ್ಪನವರ ಹಾಸನದಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಚೆನ್ನೈಯಲ್ಲಿ ಜ. 20ರಿಂದ 25ರ ವರೆಗೆ ನಡೆಯಲಿರುವ ದಕ್ಷಿಣ ಭಾರತ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಮುಖೋಪಾಧ್ಯಾಯರು, ಸಿಬ್ಬಂದಿ, ಎಸ್‌ಡಿಎಂಸಿ ಅಧ್ಯಕ್ಷರು ಅಭಿನಂದಿಸಿದ್ದಾರೆ.
ಸುನೀತಾ ರಾಷ್ಟ್ರಮಟ್ಟಕ್ಕೆ
ಹಿರೇಕೆರೂರು: ಶ್ರೀ ಸಂಗಮೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ, ಹೊಲಬಿಕೊಂಡ ಗ್ರಾಮದ ಸುನೀತಾ ಗಿರಿಮಳ್ಳಿ ಖೋಖೋ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ದಾಂಡೇಲಿಯಲ್ಲಿ ಜರುಗಿದ ಪಿಯು ಕಾಲೇಜುಗಳ ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಸಾಧನೆ ತೋರಿದ್ದರು. ರಾಷ್ಟ್ರೀಯ ಖೋಖೋ ಸ್ಪರ್ಧೆ ಮಹಾರಾಷ್ಟ್ರದ ಗುರುಗಾಂವ್‌ದಲ್ಲಿ ಜ. 7ರಿಂದ ಜರುಗಲಿದ್ದು, ರಾಜ್ಯ ತಂಡಕ್ಕೆ ಸುನೀತಾ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ರವಿ ಹುಚ್ಚಗೊಂಡರ, ಪ್ರಾಚಾರ್ಯ ಕೆ.ಎಚ್. ಮರಿಗೌಡ್ರ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಬಿ. ಸಣ್ಣಕ್ಕಿ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement