ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಿಕ್ಷಣ ಸಂಸ್ಥೆ ಕಟ್ಟುವುದು ಬಿಳಿ ಆನೆ ಸಾಕಿದಂತೆ: ಓಲೇಕಾರ

Lingaraj Badiger
Updated On : 7 Jan 2014, 12:19 pm

ಹಾವೇರಿ: ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ಸುಲಭ. ಆದರೆ ಅವುಗಳನ್ನು ನಡೆಸಿಕೊಂಡು ಹೋಗುವುದೆಂದರೆ ಬಿಳಿ ಆನೆ ಸಾಕಿದಂತೆ ಎಂದು ಮಾಜಿ ಶಾಸಕ ನೆಹರೂ ಓಲೇಕಾರ ಹೇಳಿದರು.
ನಗರದ ಪಾಪ್ಯುಲರ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ, ಒಂದು ಸಂಸ್ಥೆಯ ಕೀರ್ತಿ ಅಪಕೀರ್ತಿ ಶಿಕ್ಷಕರ ಸೇವೆಯನ್ನು ಅವಲಂಬಿಸಿದೆ. ಇಲ್ಲಿ ಶಿಕ್ಷಕರ ಶ್ರಮ ಸಾರ್ಥಕವಾಗಿದೆ ಎಂದು ಶ್ಲಾಘಿಸಿದರು.
ನಾವು ಸಮಾಜಕ್ಕೆ ಒಳ್ಳೆಯದನ್ನು ಮಾಡಿದರೆ ಸಮಾಜ ನಮ್ಮನ್ನು ಮರೆಯದು. ನನ್ನ ಅಧಿಕಾರಾವಧಿಯಲ್ಲಿ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ತೃಪ್ತಿ ನನಗಿದೆ ಎಂದು ಓಲೇಕಾರ ತಿಳಿಸಿದರು.
ಹೇಮಾ ಸಜ್ಜನರ ಮಾತನಾಡಿ, ಸಾಮಾಜಿಕ ಕಾರ್ಯಗಳನ್ನು ಮಾಡುವಾಗ ಟೀಕೆ-ಟಿಪ್ಪಣಿಗಳು ಸಹಜ. ಅವುಗಳನ್ನು ಸವಾಲಾಗಿ ಸ್ವೀಕರಿಸಿ ರಚನಾತ್ಮಕ ಕಾರ್ಯಗಳಿಂದ ಹಿಂದೆ ಸರಿಯುವುದು ಬೇಡ. ಮಾಜಿ ಶಾಸಕರು ಸಾಕಷ್ಟು ಶಾಲಾ-ಕಾಲೇಜುಗಳನ್ನು ಸ್ಥಾಪಿಸಿ, ಶಿಕ್ಷಣ ಪ್ರೇಮವನ್ನು ಮೆರೆದಿದ್ದಾರೆ ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹನುಮಂತಗೌಡ ಗೊಲ್ಲರ ಮಾತನಾಡಿ, ಅತಿನಾಗರಿಕತೆಯ ಕಾಡಿನಲ್ಲಿ ಮಾನವೀಯತೆ ಮರೆಯಾಗತೊಡಗಿದೆ. ಜಾಗತೀಕರಣ, ಆಧುನೀಕರಣ, ಖಾಸಗಿಕರಣಗಳಿಗಿಂತ ಮಾನವೀಕರಣದ ಅಗತ್ಯತೆ ಇದೆ. ಎಳೆಯ ಮಕ್ಕಳ ಮನಸ್ಸುಗಳಲ್ಲಿ ಸಂಸ್ಕಾರದ ಬೀಜ ಬಿತ್ತೋಣ ಎಂದು ತಿಳಿಸಿದರು.
ಬಾಬಣ್ಣ ಮೋಮಿನಗಾರ ಮಾತನಾಡಿದರು. ಮಾಜಿ ಶಾಸಕ ಶಿವರಾಜ ಸಜ್ಜರ, ತಾಪಂ ಮಾಜಿ ಅಧ್ಯಕ್ಷ ರುದ್ರಪ್ಪ ಹಾವೇರಿ, ಗಿರೀಶ ತುಪ್ಪದ, ಜಗದೀಶ ಮಲಗೋಡ, ಬಿ.ಡಿ. ಸಾವಕ್ಕಳವರ, ಈರಣ್ಣ ಸಂಗೂರ, ಚಂದ್ರಶೇಖರ ಕಾಮಣ್ಣನವರ, ನಾಗರಾಜ ಬಸೇಗಣ್ಣಿ ಹಾಗೂ ಕೆ.ಸಿ. ಕೋರಿ ವಿವಿಧ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ಮುಖ್ಯಾಧ್ಯಾಪಕಿ ಅನಿತಾ ಎಸ್. ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಜಿತೇಂದ್ರ ಪ್ರಜಾಪತ ನಿರೂಪಿಸಿದರು. ವರ್ಷಾ ಹಿರೇಮಠ ವಂದಿಸಿದರು. ನಂತರ ಚಿಣ್ಣರ ಸಾಂಸ್ಕೃತಿಕ ಕಾರ್ಯಕ್ರಗಳು ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement