ನಮ್ಮೂರ ಶಾಲೆಗೆ ಯುವಜನರು
ಹಾವೇರಿ: ಕರ್ನಾಟಕ ಯುವ ನೀತಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ನಮ್ಮೂರ ಶಾಲೆಗೆ ನಮ್ಮ ಯುವಜನರು ಯೋಜನೆ ಅನುಷ್ಠಾನಗೊಳಿಸಬೇಕಾಗಿದೆ. ಉತ್ತಮ ರೀತಿಯಲ್ಲಿ ತಮ್ಮ ಪ್ರತಿಭೆ, ದೂರದೃಷ್ಟಿ, ಸೇವಾನಿಷ್ಠೆ ಮತ್ತು ಜನಸಾಮಾನ್ಯರ ಸಬಲೀಕರಣಕ್ಕಾಗಿ ಅದರಲ್ಲೂ ಶಾಲೆಯ ಅಭಿವೃದ್ಧಿ ಬಗ್ಗೆ ವಿಶೇಷ ಆಸಕ್ತಿ ತೋರುವ ಮತ್ತು ಈ ನಿಟ್ಟಿನಲ್ಲಿ ಅಪಾರವಾಗಿ ಶ್ರಮಿಸುವ ಯುವಜನರನ್ನು ಪ್ರೋತ್ಸಾಹಿಸಲಾಗುವುದು. ಯುವಜನರು ತಮ್ಮ ಶಿಕ್ಷಣ ಮುಂದುವರೆಸಿ, ಸೃಜನಶೀಲ ರೀತಿಯಲ್ಲಿ ಮಾಡುವುದಕ್ಕಾಗಿ ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿಯೇತರ ಯುವಜನರು ಕೆಲಸ ಮಾಡುವಷ್ಟು ಸಾಕ್ಷರತೆ ಪಡೆದು, ಊರಿನ ಶಾಲೆ ಮತ್ತು ಶಾಲೆ ಪರಿಸರದ ನೈರ್ಮಲ್ಯ ಕಾಪಾಡುವುದು, ಶಾಲೆಗೆ ದಾಖಲಾತಿ ಶೇ. 100 ಆಗುವಂತೆ ಮಾಡುವುದು, ಆಟದ ಮೈದಾನ ಸದ್ಬಳಕೆ, ಪರೀಕ್ಷೆಯಲ್ಲಲ್ಲಿ ಗರಿಷ್ಠ ಸಾಧನೆ, ಸ್ಥಳೀಯ ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಸಾಹಸ ಮತ್ತು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುವಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾಧನೆ ಮಾಡುವ ಸಂಘಗಳಿಗೆ ರು. 1 ಲಕ್ಷ ಪ್ರೋತ್ಸಾಹಧನ ನೀಡಲಾಗುವುದೆಂದು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಜ. 20ರೊಳಗೆ ಅರ್ಜಿ ಸಲ್ಲಿಸಬೇಕು. ವಿಳಾಸ: ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾವೇರಿ.
--
ಸಂವಹನ ಮಾಹಿತಿ ಶಿಕ್ಷಣ ಅಭಿಯಾನ
ಶಿಗ್ಗಾಂವಿ: ಜಿಪಂ ಹಾಗೂ ತಾಪಂ ಆಶ್ರಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಚಟುವಟಿಕೆ ಚುರುಕುಗೊಳಿಸಲು ಕೂಲಿ ಕಾರ್ಮಿಕರಿಗೆ ಐದು ಅಂಶಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಟೋ ರಿಕ್ಷಾಗಳ ಮೂಲಕ ಯೋಜನೆಯ ಬಗ್ಗೆ ಸಂವಹನ ಮಾಹಿತಿ ಶಿಕ್ಷಣದ ವಾಹನಕ್ಕೆ ತಾಪಂ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಚಾಲನೆ ನೀಡಿದರು.
ತಾಲೂಕಿನ 25 ಗ್ರಾಪಂ ವ್ಯಾಪ್ತಿಯ ಜನರಿಗೆ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಮಾಹಿತಿ ನೀಡಲಾಗುವುದು. ತಾಪಂ ಅಧ್ಯಕ್ಷೆ ಸುಜಾತಾ ಕಲಕಟ್ಟಿ, ಉಪಾಧ್ಯಕ್ಷ ನಿಂಗಣ್ಣ ಹರಿಜನ, ಸದಸ್ಯರಾದ ಉಷಾ ಬಿಳಿಕುದುರಿ, ಉಮಾ ಡವಗಿ, ಶಾಂತಮ್ಮ ಬೊಮ್ಮನಹಳ್ಳಿ, ಫರೀದಾಬಾನು ಶೇತಸನದಿ, ನಿಂಗಣ್ಣ ಜವಳಿ, ವೀರನಗೌಡ್ರ ಪಾಟೀಲ, ಇಒ ಎಸ್.ಎಂ. ರುದ್ರಸ್ವಾಮಿ. ಸಹಾಯಕ ನಿರ್ದೇಶಕ ಎಫ್.ಜಿ. ಚಿನ್ನನವರ, ಸಹಾಯಕ ಅಧಿಕಾರಿ ಎಂ.ಎ. ಹೊನ್ನಕಸ್ತೂರಿ, ವ್ಯವಸ್ಥಾಪಕ ವಿ.ಎಂ. ಕಿವುಡನವರ, ಕೆ.ಆರ್. ರಿತ್ತಿ. ರಾಜೇಶ್ವರಿ, ಎಂ.ಬಿ. ಹೂಗಾರ ಇದ್ದರು.