ರಸ್ತೆ ಡಾಂಬರೀಕರಣ ಕಾಮಗಾರಿಗೆ ಜಗದೀಶ ಶೆಟ್ಟರ್ ಭೂಮಿಪೂಜೆ
ಹುಬ್ಬಳ್ಳಿ: ಉಣಕಲ್-ಹೆಬ್ಬಳ್ಳಿ ರಸ್ತೆ ಡಾಂಬರಿಕರಣ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಭೂಮಿಪೂಜೆ ನೆರವೇರಿಸಿದರು.
ರಾಜ್ಯ ಸರ್ಕಾರದ ಅನುದಾನದಡಿ ಉಣಕಲ್ನಿಂದ ಹೆಬ್ಬಳ್ಳಿವರೆಗಿನ 2.5 ಕಿ.ಮೀ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಶೆಟ್ಟರ, ಉಣಕಲ್- ಹೆಬ್ಬಳ್ಳಿ ರಸ್ತೆಯು ಅಮ್ಮಿನಬಾವಿ ಮುಖಾಂತರ ಸವದತ್ತಿಗೆ ಹೋಗುವುದಕ್ಕೆ ಟ್ರಾಫಿಕ್ ರಹಿತ ರಸ್ತೆಯಾಗಿದ್ದು, ಈ ಭಾಗದ ರೈತರಿಗೂ ಈ ರಸ್ತೆಯಿಂದ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು. ಪಾಲಿಕೆ ಸದಸ್ಯ ಉಮೇಶ ಕೌಜಗೇರಿ, ಉಣಕಲ್ ಗ್ರಾಮದ ಹಿರಿಯರಾದ ಚನ್ನಪ್ಪಗೌಡ ಪಾಟೀಲ, ಬಸಳ್ಳಿ ಹೆಬ್ಬಳ್ಳಿ, ಮಲ್ಲಿಕಾರ್ಜುನ ಮರಿಗೌಡರ, ಶಿವು ಪಾಟೀಲ, ರಾಮಚಂದ್ರ ಜಾಧವ, ರಾಜು ಅಡ್ಡಣಗಿ ಶಿವಪ್ಪ ನಾಗೋಜಿ, ಇನ್ನಿತರರು ಇದ್ದರು.