ರೊಟ್ಟಿ ಜಾತ್ರೆ...
ಹಾವೇರಿ: ಹುಕ್ಕೇರಿಮಠದ ಶಿವಬಸವ ಶಿವಯೋಗಿಗಳ 68ನೇ, ಶಿವಲಿಂಗ ಶ್ರೀಗಳ 5ನೇ ಸ್ಮರಣೋತ್ಸವ ಹಾಗೂ ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ಪ್ರಥಮ ಬಾರಿಗೆ ಬೃಹತ್ ರೊಟ್ಟಿ ಜಾತ್ರೆ ನಡೆಯಿತು.
ಹಾವೇರಿ ನಗರ ಹಾಗೂ ತಾಲೂಕಿನ ಕುಳೇನೂರ, ಹೊಂಬರಡಿ, ನೆಲೋಗಲ್, ತೋಟದ ಯಲ್ಲಾಪುರ, ಬಸನಕಟ್ಟಿ ಮತ್ತಿತರ ಗ್ರಾಮಗಳಿಂದ ಭಕ್ತಾದಿಗಳು 35 ಸಾವಿರಕ್ಕೂ ಅಧಿಕ ರೊಟ್ಟಿ ಹಾಗೂ ಒಂದು ಕ್ವಿಂಟಲ್ಗೂ ಹೆಚ್ಚು ಶೇಂಗಾ ಚಟ್ನಿಯನ್ನು ನೀಡಿದರು. ಹುಕ್ಕೇರಿಮಠದ ಸದಾಶಿವ ಶ್ರೀಗಳು ರೊಟ್ಟಿ ತುಂಬಿದ ಚಕ್ಕಡಿ, ಟ್ರ್ಯಾಕ್ಟರ್ಗಳ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣೆಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು.
ಸದಾಶಿವ ಸ್ವಾಮೀಜಿ ಮತ್ತು ಅಕ್ಕಿಆಲೂರಿನ ವಿರಕ್ತಮಠ ಶಿವಬಸವ ಶ್ರೀಗಳು ಚಕ್ಕಡಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಭಕ್ತಾಧಿಗಳು ಜಯಘೋಷ ಕೂಗಿದರು. ಸಂಗ್ರಹವಾದ ರೊಟ್ಟಿಗಳನ್ನು ಜ. 10ರ ವರೆಗೆ ನಡೆಯುವ ಜಾತ್ರೆಯಲ್ಲಿ ದಾಸೋಹಕ್ಕೆ ಬಳಸಲಾಗುವುದು. ಇನ್ನೂ 10 ಸಾವಿರಕ್ಕೂ ಅಧಿಕ ರೊಟ್ಟಿ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಸದಾಶಿವ ಶ್ರೀಗಳು ತಿಳಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.