ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಲೋಕ ಕಲ್ಯಾಣಕ್ಕಾಗಿ ಶರಣರಿಂದ ವಚನ ಸಾಹಿತ್ಯ: ಇಟಗಿ ಈರಣ್ಣ

Lingaraj Badiger
Updated On : 8 Jan 2014, 1:18 am

ಹಾವೇರಿ: ಹೆಸರು ಮಾಡಬೇಕೆಂದು ಶರಣರು ವಚನ ರಚಿಸಲಿಲ್ಲ. ಸಮಾಜದಲ್ಲಿ ಬದಲಾವಣೆ ತರುವ ಮೂಲಕ ಲೋಕ ಕಲ್ಯಾಣ ಬಯಸಿದರು ಎಂದು ವಿಶ್ರಾಂತ ಪ್ರಾಧ್ಯಾಪಕ ಇಟಗಿ ಈರಣ್ಣ ಹೇಳಿದರು.
ಹುಕ್ಕೇರಿಮಠದಲ್ಲಿ ಲಿಂ. ಶಿವಬಸವ ಶಿವಯೋಗಿಗಳ 68ನೇ ಹಾಗೂ ಶಿವಲಿಂಗ ಶ್ರೀಗಳ 5ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಚನಗಳ ಮೂಲಕ ಶರಣರು ಅನಾಚಾರಗಳ ಬಗ್ಗೆ ಜಾಗೃತಿ ಮೂಡಿಸಿದರು. ಜನರು ಆಡುವ ಮಾತಿನಲ್ಲಿ ವಚನಗಳನ್ನು ರಚಿಸುವ ಮೂಲಕ ಅದನ್ನು ದೇವಭಾಷೆಯಾಗಿಸಿದರು. ವಚನಗಳ ಹಿರಿಮೆ ದೊಡ್ಡದು. ಅವನ್ನು ಯಾರೂ ಹಗುರವಾಗಿ ಪರಿಗಣಿಸಬಾರದು. ವಚನಗಳಿಗೆ ಭದ್ರ ಬುನಾದಿ ಹಾಕಿದವರು ಬಸವಣ್ಣ. ನುಡಿಯ ಗುಡಿಯನ್ನು ಕಟ್ಟುವ ಮೂಲಕ ಹೃದಯಗಳಿಗೆ ತಲುಪುವ ಮಾತೇ ವಚನವಾಗಿದೆ. ವಚನ ಅಧ್ಯಯನವೆಂದರೆ ಶರಣರ ಮೇಲೆ ಮಾಡುವ ಪ್ರಮಾಣ. ವಚನಗಳು ಜನರಿಗೆ ಔಷಧಿಯಾಗಿವೆ. ಮಾಧ್ಯಮಗಳಲ್ಲಿ ಅಪರಾದ ಸುದ್ದಿಗಳೇ ವಿಜೃಂಭಿಸುತ್ತವೆ. ಶರಣರ ವಚನಗಳನ್ನು ಅಧ್ಯಯನ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಹೇಳಿದರು.
ಕರ್ಜಗಿ ಗೌರಿಮಠದ, ಗುರುಪಾದ ದೇವರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹರಸೂರು ಬಣ್ಣದಮಠದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶ್ರೀ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ ಸಮ್ಮಖ ವಹಿಸಿದ್ದರು. ಸಂಸದ ಶಿವಕುಮಾರ ಉದಾಸಿ, ಎಸ್.ಎಸ್. ಮುಷ್ಟಿ, ಶಿವಬಸಪ್ಪ ಹುರಳಿಕುಪ್ಪಿ, ಮಹೇಶ ಚಿನ್ನಿಕಟ್ಟಿ ಇದ್ದರು. ಜಿ.ಕೆ. ಹೂಗಾರ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು. ಕೆ.ಆರ್. ನಾಶಿಪುರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement