ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬ್ಯಾಡಗಿಯಲ್ಲಿ ಪ್ರತಿಭಟನೆ

Mainashree
Updated On : 9 Jan 2014, 10:47 am

ಬ್ಯಾಡಗಿ: ಅಡುಗೆ ಹಾಗೂ ಆಟೋ ಗ್ಯಾಸ್ ದರ ಹೆಚ್ಚಿಸಿದ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಶಿವಶಂಕರ ನಾಯಕ್‌ಗೆ ಮನವಿ ಸಲ್ಲಿಸಿದರು. ಹಳೇ ಪುರಸಭೆ ಪಕ್ಕ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ಮಹಿಳಾ ಮೋರ್ಚಾ ಅಧ್ಯಕ್ಷೆ ಗಿರಿಜಾ ಪಟ್ಟಣಶೆಟ್ಟಿ ಮಾತನಾಡಿ, ಅಭಿವೃದ್ಧಿಯಿಂದಲೇ ವಿಶ್ವಕ್ಕೆ ಪರಿಚಿತರಾದ ಮೋದಿ ಕಾರ್ಯವೈಖರಿಯನ್ನು ನೋಡಿ ಕಲಿಯಿರಿ. ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದೂ ತಿಳಿಸಿದರು. ಸರಳಾ ಕಬ್ಬೂರ ಹಾಗೂ ಮಧು ಮುಚ್ಚಟ್ಟಿ ಮಾತನಾಡಿ, ಜನ ಸಾಮಾನ್ಯರ ನೋವನ್ನು ಅರ್ಥ ಮಾಡಿಕೊಳ್ಳದ ಕೇಂದ್ರ ಸರ್ಕಾರ ರು. 27ರಲ್ಲಿ ಒಬ್ಬ ವ್ಯಕ್ತಿ ಒಂದು ದಿನ ಬದುಕಬಹುದು ಎಂದು ಹೇಳಿದೆ. ಯುಪಿಎ ಸರ್ಕಾರದ ದುರಾಡಳಿತದಿಂದ ಬೇಸತ್ತ ಜನ ಈ ಬಾರಿ ಬಿಜೆಪಿ ಆಯ್ಕೆ ಮಾಡಲು ನಿರ್ಧರಿಸಿದ್ದಾರೆ ಎಂದರು.
ಶಿವಕ್ಕ ಅಂಗಡಿ, ಗುತ್ತೆಮ್ಮ ಮಾಳಗಿ, ತಾಲೂಕಾಧ್ಯಕ್ಷ ರಾಮಣ್ಣ ಉಕ್ಕುಂದ, ಕಾರ್ಯದರ್ಶಿ ಮಲ್ಲಿಕಾರ್ಜುನ ದೊಡ್ಮನಿ, ಮುಖಂಡರಾದ ಬಿ.ಬಿ. ಬಂಗೇರ, ವೀರಭದ್ರಗೌಡ ಹೊಮ್ಮರಡಿ, ವೀರೇಂದ್ರ ಶೆಟ್ಟರ, ಸುರೇಶ ಅಸಾದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement