ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಭಾಷೆ ಸಾಹಿತ್ಯ, ಸಂಸ್ಕೃತಿ ಪ್ರತಿಬಿಂಬ

Mainashree
Updated On : 11 Jan 2014, 11:34 am

ಬ್ಯಾಡಗಿ: ಭಾಷೆ ಒಂದು ಸಂಪರ್ಕ ಮಾಧ್ಯಮ. ಅದರಿಂದ ಹೊರಬರುವ ಸಾಹಿತ್ಯ, ಸಂಸ್ಕೃತಿ ಮೌಲ್ಯಗಳನ್ನು ಸಮಾಜಕ್ಕೆ ತಿಳಿಸಿಕೊಡಲಿದೆ ಎಂದು ಬಿಆರ್‌ಇ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕಿ ಜಯಶ್ರೀ ನೀರಲಗಿಮಠ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಎಂಡಿಎಚ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ದಿ. ದೊಡ್ಡಬಸಪ್ಪ ಶಿರೂರ ಅವರ ಸ್ಮರಣಾರ್ಥ ಆಯೋಜಿಸಿದ್ದ ದತ್ತಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಹುಟ್ಟಿದ ಮಗು ತಾಯಿಯ ಮೂಲಭಾಷೆಯನ್ನು ಸರಳವಾಗಿ ಅರ್ಥೈಸಿಕೊಳ್ಳುತ್ತದೆ. ಹೀಗಾಗಿ ಮಾತೃ ಭಾಷೆಗೆ (ಮದರ್ ಟಂಗ್) ಅತಿ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಮಹಿಳೆಗೆ ಈ ಸಾಮರ್ಥ್ಯವಿರದಿದ್ದರೆ ಶಾಲೆಯಲ್ಲಿ ಕಲಿಯುವ ಭಾಷೆಯೇ ಪ್ರತಿಯೊಂದು ಮಗುವಿಗೆ ಮಾತೃ ಭಾಷೆಯಾಗಿರುತ್ತಿತ್ತು ಎಂದರು.
ಕುಟುಂಬ ನಿರ್ವಹಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಮಹಿಳೆ ಭಾಷೆ ಮತ್ತು ಸಾಹಿತ್ಯಗಳನ್ನು ಪ್ರವೃತ್ತಿಯಾಗಿ ಸ್ವೀಕರಿಸಬೇಕಾಗುತ್ತದೆ. ಅದಾಗ್ಯೂ ಬಹಳಷ್ಟು ಮಹಿಳಾ ಸಾಹಿತಿಗಳು ಸಾಹಿತ್ಯಿಕ ವಿಚಾರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದರು. ಹೆಳವನಕಟ್ಟೆ ಗಿರಿಯಮ್ಮ, ಸಂಚಿ ಹೊನ್ನಮ್ಮ, ಜಯದೇವಿತಾಯಿ ಲಿಗಾಡೆ, ಶಾಂತಾದೇವಿ ಮಾಳವಾಡ, ಮಲ್ಲಿಕಾ ಘಂಟಿ, ಕಮಲಾ ಹಂಪನಾ ಇನ್ನಿತರ ಮಹಿಳಾ ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ಸಮಾಜ ಪರಿವರ್ತನೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಆದರ್ಶ ಶಿಕ್ಷಣ ಸಂಸ್ಥೆ ನಿರ್ದೇಶಕ ವೀರೇಶ ಶಿರೂರ  ಮಾತನಾಡಿ, ಮಹಿಳೆಗೆ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಬಲ್ಲ ಶಕ್ತಿಯಿದ್ದರೂ ಪುರುಷ ಪ್ರಧಾನ ಸಮಾಜ ಆಕೆಯ ಎಲ್ಲ ಸಾಧನೆಗಳನ್ನು ಗೌಣವಾಗುವಂತೆ ಮಾಡಿದ್ದು, ಇದಕ್ಕೆ ಮಹಿಳಾ ಸಾಹಿತಿಗಳು ಹೊರತಾಗಿಲ್ಲ ಎಂದರು.
ಅತಿಥಿ ಬಾಲಚಂದ್ರ ಪಾಟೀಲ ಮಾತನಾಡಿ, ಭಾಷಾಭಿನಮಾಕ್ಕೆ ಸಮನಾದ ಅರ್ಥವಿಲ್ಲ. ಈ ಕುರಿತು ಪದಗಳಲ್ಲಿ ಮಾತನಾಡುವುದಕ್ಕಿಂತ ಕೃತಿಯಲ್ಲಿ ಮಾಡಿ ತೋರಿಸಬೇಕಾಗಿದೆ. ನೆಲ, ಜಲ, ಭಾಷೆ ನಮ್ಮ ಜನ್ಮಸಿದ್ಧ ಹಕ್ಕು ಪ್ರಾದೇಶಿಕ ಅಸಮಾನತೆ ಆಗಿದ್ದರೆ ಅದಕ್ಕಾಗಿ ಹೋರಾಟ ಮಾಡಬೇಕೆ ವಿನಹಃ ಪ್ರತ್ಯೇಕತೆ ಬಗ್ಗೆ ಮಾತನಾಡುವುದು ಸರಿಯಾದ ಕ್ರಮವಲ್ಲ ಎಂದರು. ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಮಾಲತೇಶ ಅರಳಿಮಟ್ಟಿ. ಗೌರವಕಾರ್ಯದರ್ಶಿ ಬಸವರಾಜ ದೊಡ್ಮನಿ, ವಿ.ವಿ. ಮಾತನವರ ಎಂಡಿಎಚ್ ಪ್ರೌಢಶಾಲೆ ಮುಖ್ಯಶಿಕ್ಷಕಿ ಪಾರ್ವತಿ ಪಾಟೀಲ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಶಾಂತಾ ಕರೇಗೌಡ್ರ ಉಪಸ್ಥಿತರಿದ್ದರು. ನಿವೇದಿತಾ ಸಂಗಡಿಗರು ಪ್ರಾರ್ಥಿಸಿದರು. ಶಂಕ್ರಮ್ಮ ಕೆಂಚನಗೌಡ್ರ ಸ್ವಾಗತಿಸಿದರು. ಅಶ್ವಿನಿ ಕನವಳ್ಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement