ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಕ್ಕಳಿಗೆ ಟಿವಿ, ಮೊಬೈಲ್ ಹುಚ್ಚು ಬೇಡ: ಬಸೇಗಣ್ಣಿ

Mainashree
Updated On : 11 Jan 2014, 11:34 am

ಹಾವೇರಿ: ಮಕ್ಕಳಿಗೆ ಪರೀಕ್ಷೆ ದಿನಗಳು ಹತ್ತಿರವಾಗುತ್ತಿದ್ದು, ಪಾಲಕರು ಮನೆಯಲ್ಲಿ ಓದುವ ವಾತಾವರಣ ನಿರ್ಮಿಸಿ ಟಿವಿ, ಮೊಬೈಲ್‌ಗಳಿಂದ ಅವರನ್ನು ದೂರವಿರಿಸಬೇಕು ಎಂದು ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಕಿವಿ ಮಾತು ಹೇಳಿದರು.
ತಾಲೂಕಿನ ಅಗಡಿ ಗ್ರಾಮದ ಶೇಷಾಚಲ ಸದ್ಗುರು ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಹಾಗೂ ಮಾತೆಯರ ಸಭೆಯಲ್ಲಿ ಅವರು ಮಾತನಾಡಿ, ಮೊದಲು ನೀವು ಸಿನಿಮಾ ಧಾರಾವಾಹಿಗಳಿಂದ ದೂರವಿರಬೇಕು. ಮಕ್ಕಳ ಪರೀಕ್ಷೆ ಮುಗಿಯುವವರೆಗೂ ಟಿವಿ ಹಚ್ಚಬೇಡಿ ಎಂದರು. ನಿವೃತ್ತ ಮುಖ್ಯಾಧ್ಯಾಪಕ ಹನುಮಂತಗೌಡ ಗೊಲ್ಲರ ಮಾತನಾಡಿ, ಯಾವ ತಪ್ಪನ್ನು ಮಕ್ಕಳು ಮಾಡಬಾರದೆಂದು ನೀವು ಬಯಸುತ್ತೀರೋ ಅದೇ ತಪ್ಪನ್ನು ನೀವು ಮಾಡಬೇಡಿ. ಮಕ್ಕಳಿಗೆ ಮನೆ ಮೊದಲ ಪಾಠ ಶಾಲೆ, ತಂದೆ-ತಾಯಿಗಳೇ ಗುರುಗಳಾಗಿರುವುದರಿಂದ ತಂದೆಗಿಂತ ತಾಯಿಯ ಪಾತ್ರ ಅತ್ಯಂತ ಪ್ರಮುಖವಾಗಿದೆ. ಯಾವಾಗ ಓದಬೇಕು, ಯಾವಾಗ ಏಳಬೇಕು, ಯಾವಾಗ ಮಲಗಬೇಕು. ಇದನ್ನು ಮಕ್ಕಳಿಗೆ ಕಲಿಸಿರಿ ಎಂದರು. ಮಾತೆಯರ ಪರವಾಗಿ ಮೀನಾಕ್ಷಿ ಯಾದಗುಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಇಂಗ್ಲಿಷ್, ಗಣಿತ, ವಿಜ್ಞಾನ ಕಠಿಣ ವಿಷಯಗಳಾಗಿದ್ದರಿಂದ ಶಿಕ್ಷಕರು ವಿಶೇಷ ಆಸಕ್ತಿ ವಹಿಸಿ ಹೆಚ್ಚಿನ ಮುತುವರ್ಜಿ ವಹಿಸಿಬೇಕು. ಈ ಕಾರ್ಯಕ್ರಮ ನಮಗೆ ಪ್ರೇರಣೆ, ಸ್ಫೂರ್ತಿ ನೀಡಿದೆ. ಇನ್ನು ಮುಂದೆ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವುದಾಗಿ ಹೇಳಿದರು. ಮುಖ್ಯಾಧ್ಯಾಪಕ ರಾಘವೇಂದ್ರ ನಾಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ಆಂಗ್ಲಭಾಷಾ ಶಿಕ್ಷಕ ಇಟಗಿ, ರೇಣುಕಾ, ಗೀತಾ ಕವಲಗುಡ್ಡ ಗುರು ಮಾತೆಯರು ವೇದಿಕೆಯಲ್ಲಿದ್ದರು. ಮುಬಿನಾ, ಅನ್ನಪೂರ್ಣಾ, ಶ್ವೇತಾ, ನೀಲಮ್ಮ, ಅಕ್ಕಮ್ಮ ಪ್ರಾರ್ಥಿಸಿದರು. ಮಲ್ಲಪ್ಪ ಮಣ್ಣೂರು ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement