ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಾಧು-ಸಂತರ ಸೇವೆ ಅನನ್ಯ: ಶಿವಲಿಂಗೇಶ್ವರಶ್ರೀ

Mainashree
Updated On : 11 Jan 2014, 11:34 am

ಹಾವೇರಿ: ಮಹಾತ್ಮರು, ಸಾಧುಸಂತರು, ಸತ್ಪುರುಷರು, ಲೋಕಕಲ್ಯಾಣಕ್ಕೆ ಸಲ್ಲಿಸುತ್ತಿರುವ ಸೇವೆ ಅನನ್ಯ. ನಿಜವಾದ ಭಕ್ತರ ಸೇವೆ ಶಿವಪಾರ್ವತಿಯರನ್ನು ಮೆಚ್ಚಿಸುವಂತಿರಬೇಕು ಎಂದು ಮಾದನಹಿಪ್ಪರಗಿ ಮಾಹಾಂತ ದೇವರ ಉತ್ತರಾಧಿಕಾರಿ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿಮಠದಲ್ಲಿ ಗುರುವಾರ ಸಂಜೆ ನಡೆದ ಶಿವಬಸವ ಶಿವಯೋಗಿಗಳವರ 68ನೇ ಹಾಗೂ ಶಿವಲಿಂಗ ಶ್ರೀಗಳ 5ನೇ ಪುಣ್ಯ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಾವೇರಿ ಶರಣ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದೆ. ದುಡಿಮೆಯ ಒಂದು ಭಾಗವನ್ನು ಧಾರ್ಮಿಕ ಕಾರ್ಯಗಳಿಗೆ, ಇನ್ನೊಂದು ಭಾಗವನ್ನು ದೀನ ದುರ್ಬಲರಿಗೆ ಧಾನ ಧರ್ಮ ಮಾಡಬೇಕು ಎಂದ ಅವರು, ಪ್ರತಿಯೊಬ್ಬರೂ ಶರಣರ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು. ಇದೇ ಸಂದರ್ಭ ಹುಬ್ಬಳ್ಳಿ ಮೂರು ಸಾವಿರಮಠ ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಹಾವೇರಿ ಮಿತ್ರ ವಾರ ಪತ್ರಿಕೆಯ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಪಸುಸಂಗೋಪನಾ ಇಲಾಖೆ ಅಧಿಕಾರಿ ರಾಜು ಕೊಲೇರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ, ಮಠದ ಭಕ್ತ ಷಣ್ಮುಖಪ್ಪ ಹತ್ತಿ, ಹಾವೇರಿ ಮಿತ್ರ ಪತ್ರಿಕೆಯ ವಿನಾಯಕ ಹುದ್ದಾರ, ನಿಲಪ್ಪ ಪುರದ, ಸಿದ್ದಣ ಕಡೆಮನಿ ಅವರನ್ನು ಶ್ರೀಮಠದ ವತಿಯಿಂದ ಗೌರವಿಸಲಾಯಿತು.
ಹುಬ್ಬಳ್ಳಿ ಮೂರು ಸಾವಿರಮಠ ಗುರುಸಿದ್ಧರಾಜಯೋಗೀಂದ್ರ ಶ್ರೀಗಳು, ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ಜಮಖಂಡಿ ಓಲೇಮಠದ ಡಾ. ಅಭಿನವಕುಮಾರ ಚನ್ನಬಸವ ಸ್ವಾಮೀಜಿ, ಅಕ್ಕಿಆಲೂರ ವಿರಕ್ತಮಠದ ಚನ್ನವೀರೇಶ್ವರ ಸ್ವಾಮೀಜಿ, ಕೂಡಲ ಮಹೇಶ್ವರ ದೇವರು ಸಮ್ಮುಖ ವಹಿಸಿದ್ದರು.
ಕರ್ನಾಟಕ ವಿವಿಯ ಸಂಗೀತ ವಿಭಾಗದ ಪ್ರಾಧ್ಯಾಪಕ ಡಾ. ಮೃತ್ಯುಂಜಯ ಅಗಡಿ, ಸಂಗಡಿಗರು ಹಾಗೂ ಶಿವಲಿಂಗೇಶ್ವರ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಸಂಗೀತ ಸೇವೆ ನೀಡಿದರೆ, ಮಠದ ಪ್ರಸಾದ ನಿಲಯದ ವಿದ್ಯಾರ್ಥಿಗಳು ಭ್ರಷ್ಟರು ಯಾರು ಎಂಬ ಕಿರು ನಾಟಕ ಪ್ರದರ್ಶಿಸಿದರು.
ದಿ.ಎಂ. ಕರಬಸಪ್ಪನವರ ಸ್ಮರಣಾರ್ಥ ಮುದಗಲ್ಲ ಸಹೋದರರು ಭಕ್ತಿ ಸೇವೆ ಸಲ್ಲಿಸಿದರು. ದಾಸೋಹ ಸೇವೆಯನ್ನು ಶಂಭಣ್ಣ ಶಿರೂರ ನೇರವೇರಿಸಿದರು. ಆರ್.ಎಸ್. ಮಡಿವಾಳ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಿ.ಎಂ. ಪಟ್ಟಣಶೆಟ್ಟರ ಸ್ವಾಗತಿಸಿದರು. ಎಚ್.ಆರ್. ಹೊಸಮನಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement