ಕ್ರೀಡೆ ಮೂಲಕ ಯುವಕರ ಸಂಘಟನೆ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 11
ಯುವಕರಲ್ಲಿ ಕ್ರೀಡಾಸ್ಫೂರ್ತಿ ಮೂಡಿಸಿ, ರಾಜಕೀಯದ ಹೊರತಾಗಿ ದೇಶದ ಒಳಿತಿನ ದೃಷ್ಟಿಯಿಂದ ಕ್ರೀಡೆಯ ಮೂಲಕ ಯುವಕರನ್ನು ಸಂಘಟಿಸುವ ಕಾರ್ಯ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು.
'ಖೇಲೇಗಾ ಯುವ, ಜೀತೇಗಾ ಭಾರತ್' ಅಂಗವಾಗಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿದ ಅವರು, ಯುವಕರು ಜಾಗೃತರಾಗಿ ದೇಶವನ್ನು ಸುಭದ್ರಗೊಳಿಸಲು ಪಣ ತೊಡಬೇಕಿದೆ ಎಂದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರದೀಪ ಮುಳ್ಳೂರು ಪ್ರಾಸ್ತಾವಿಕ ಮಾತನಾಡಿ, ವಿವೇಕಾನಂದರ 151ನೇ ಜನ್ಮ ವರ್ಷಾಚರಣೆ ಅಂಗವಾಗಿ ಯುವ ಮೋರ್ಚಾ ದೇಶಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ಸಂಘಟಿಸಲಾಗಿದೆ. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪಂದ್ಯಾವಳಿ ನಡೆಯಲಿದೆ. ಪ್ರಸಕ್ತ ಪಂದ್ಯಾವಳಿಯಲ್ಲಿ ಜಿಲ್ಲೆಯ 20 ತಂಡಗಳು ಭಾಗವಹಿಸುತ್ತಿವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ, ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಜಿಪಂ ಸದಸ್ಯ ವಿರೂಪಾಕ್ಷ ಬಳ್ಳಾರಿ, ಪ್ರಸನ್ನ ಧಾರವಾಡಕರ, ಗಂಗಾಧರ ಹೂಗಾರ, ಅಚ್ಯುತ ಹೆಸರೂರು, ಶಿವರಾಜ ನೀರಲಗಿ, ವೀರೇಶ ಹುಬ್ಬಳ್ಳಿ, ಶಂಕ್ರಪ್ಪ ಪೂಜಾರ, ರಾಜು ತಳವಾರ, ಸೋಮೇಶ್ವರ ಕುರ್ಡೇಕರ್, ಸುರೇಶ ಚಲವಾದಿ, ಮಲ್ಲಿಕಾರ್ಜುನ ಹೊಸಮನಿ, ರವಿಚಂದ್ರ ರಾಜಪುರೋಹಿತ, ಪ್ರಶಾಂತ ಎಂ. ಕಜ್ಜಿ, ಪುಟ್ಟು ಕಿತ್ತೂರ, ಸಂತೋಷ ಹುಣಸ್ಯಾಳ, ರವಿರಾಜ ಹಾದಿಮನಿ, ಪ್ರಭುಗೌಡ ಇಟಗಿ, ವಿನಯ ಪಾಟೀಲ, ತಿಮ್ಮನಗೌಡ ಪಾಟೀಲ, ರುದ್ರಮುನಿ ಹಿರೇಮಠ, ದಿನೇಶ ಜಾನ್ಮನೆ ಇದ್ದರು.