ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗಾಡಾ ಓಡಿಸುವ ಸ್ಪರ್ಧೆ: ರೈತರ ಬಳಗ ಪ್ರಥಮ

Rashmi Kasaragodu
Updated On : 12 Jan 2014, 1:56 am

ಹಾವೇರಿ: ಸಮೀಪದ ತೋಟದ ಯಲ್ಲಾಪುರದಲ್ಲಿ ಮೈಲಾರಲಿಂಗೇಶ್ವರ ಯುವಶಕ್ತಿ ಸಂಘದ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಧಾರವಾಡದ ಗ್ರಾಮೀಣ ರೈತರ ಬಳಗ ಪ್ರಥಮ ಬಹುಮಾನ ಪಡೆದಿದೆ. ಟಿವಿಎಸ್ ಎಕ್ಸೆಲ್ ವಾಹನ ಪ್ರಥಮ ಬಹುಮಾನವಾಗಿತ್ತು. ಮಾಸಣಕಟ್ಟಿ ಮೈಲಾರಲಿಂಗೇಶ್ವರ ಪ್ರಸನ್ನ ದ್ವಿತೀಯ ಸ್ಥಾನ ರು. 20 ಸಾವಿರ ನಗದು, ಯಲ್ಲಮ್ಮಾ ದೇವಿ ಪ್ರಸನ್ನ ತೃತೀಯ ಸ್ಥಾನವಾಗಿ 5 ಗ್ರಾಂ ಚಿನ್ನ ಬಹುಮಾನ ಪಡೆಯಿತು. ಗುರುಪಾದಪ್ಪ ದೊಡ್ಮನಿ, ಮಾಲತೇಶ ಕಳ್ಳಿಹಾಳ, ನಿಂಗನಗೌಡ್ರ ಹೊಟ್ಟಿಗೌಡ್ರ, ಚಂದ್ರಪ್ಪ ದೊಡ್ಮನಿ, ಗಣೇಶ ದೊಡ್ಮನಿ, ಫಕ್ಕೀರಪ್ಪ ದೊಡ್ಮನಿ, ಮೌಲಾ ಜಿಗರಿ, ಗಿರೀಶ ಬಿಷ್ಟನಗೌಡ್ರ, ಸುಲೇಮಾನ ಮೇಲ್ಮುರಿ, ಟಿ.ಎಚ್. ಕಲಕೋಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement