ನಾಳೆಯಿಂದ ಮದ್ಯವರ್ಜನ ಶಿಬಿರ
ಹಾನಗಲ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾನಗಲ್ಲಿನಲ್ಲಿ ಜ. 13ರಂದು 658ನೇ ಮದ್ಯವರ್ಜನ ಶಿಬಿರವನ್ನು ಆರಂಭಿಸುತ್ತಿದ್ದು, ಬೊಮ್ಮನಹಳ್ಳಿಯ ವಿರಕ್ತಮಠದ ಶಿವಯೋಗೀಶ್ವರ ಶ್ರೀಗಳು ಶಿಬಿರ ಉದ್ಘಾಟಿಸುವರು. ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆಯುವ 7 ದಿನಗಳ ಶಿಬಿರವನ್ನು ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬೆಳ್ತಂಗಡಿ, ಕರ್ನಾಟಕ ರಾಜು ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಹಾನಗಲ್ಲ, ಸ್ವಸಹಾಯ ಸಂಘಗಳ ಒಕ್ಕೂಟ, ಹಾನಗಲ್ಲ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಹಾನಗಲ್ಲ ಇವುಗಳ ಸಹಯೋಗದಲ್ಲಿ ಆಯೋಜಿಸಲಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ವಹಿಸುವರು. ಶಾಸಕ ಮನೋಹರ ತಹಶೀಲ್ದಾರ, ಮಾಜಿ ಸಚಿವ ಸಿ.ಎಂ. ಉದಾಸಿ, ಸಂಸದ ಶಿವಕುಮಾರ ಉದಾಸಿ, ಜಿಪಂ ಸದಸ್ಯ ಪದ್ಮನಾಭ ಕುಂದಾಪುರ, ವಸಂತ ಸಾಲಿಯಾನ, ಮಲ್ಲನಗೌಡ ವೀರನಗೌಡ್ರ, ಲಕ್ಷ್ಮೀ ಹರಿಜನ, ಬಿ.ಎಸ್. ಅಕ್ಕಿವಳ್ಳಿ, ಪಿಎಸ್ಐ ಮಹದೇವ ಯಲಿಗಾರ, ಅಜ್ಜನಗೌಡ್ರು ಪಾಟೀಲ ಅತಿಥಿಗಳಾಗಿ ಪಾಲ್ಗೊಳ್ಳುವರು.