ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಯಾರೂ ದಡ್ಡರಲ್ಲ, ಪರೀಕ್ಷೆ ಭಯವೇಕೆ?: ಗೊಲ್ಲರ

Rashmi Kasaragodu
Updated On : 12 Jan 2014, 2:01 am


ಹಾವೇರಿ: ಮಕ್ಕಳಲ್ಲಿ ಪರೀಕ್ಷೆಯ ಭಯ ದೂರ ಮಾಡಿ, ಶಿಕ್ಷಕರು, ಪಾಲಕರು ಆತ್ಮವಿಶ್ವಾಸ ಮೂಡಿಸಬೇಕು ಎಂದು ನಿವೃತ್ತ ಮುಖ್ಯಾಧ್ಯಾಪಕ ಹನುಮಂತಗೌಡ ಗೊಲ್ಲರ ಹೇಳಿದರು. ನಗರಸಭೆ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಹೇಗೆ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿದ್ದ ಅವರು, ಯಾರೂ ದಡ್ಡರಲ್ಲ. ಆದರೆ, ಕಲಿಕೆಗೆ, ನೆನಪಿಗೆ ಯಾವುದೇ ಅಡ್ಡದಾರಿ ಇಲ್ಲ. ನೆನಪಿನ ಶಕ್ತಿ ಹೆಚ್ಚಿಸುವ ಔಷಧವಿಲ್ಲ ಎಂದರು. ಪ್ರಶ್ನಾವಳಿ ವಿತರಿಸಿ, ಉತ್ತರ ಪಡೆದು ಜ್ಞಾಪಕಶಕ್ತಿ ಪರೀಕ್ಷಿಸಿದರು. ಓದುವ ವಿಷಯ ಸುಲಭವಾಗಿದೆ. ಅದರಲ್ಲೇ ಪ್ರಶ್ನೆಗಳು ಬರುತ್ತವೆ. ಅವೂ ಸುಲಭವಾಗಿರುತ್ತವೆ ಎಂಬ ಭಾವನೆಯಿಂದ ವಿದ್ಯಾರ್ಥಿಗಳು ಓದಬೇಕು. ಓದಿದ್ದನ್ನು ನೆನಪಿಟ್ಟುಕೊಳ್ಳಬೇಕು ಎಂದರು.  ಮುಖ್ಯಾಧ್ಯಾಪಕಿ ಶೋಭಾ ಜಾಗಟಗೇರಿ ಅಧ್ಯಕ್ಷತೆ ವಹಿಸಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಗಳಿಕೆ ಅನಿವಾರ್ಯ. ಶಾಲೆಯ 9ನೇ ವರ್ಗದ ವಿದ್ಯಾರ್ಥಿಗಳಿಗೂ ಇಂತಹ ಕಾರ್ಯಾಗಾರವನ್ನು ಮಾಡಬೇಕು. ಗುರಿ ಸಾಧನೆಗೆ ನಿರಂತರ ಪ್ರಯತ್ನ ಅಗತ್ಯವೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement