ಶ್ರೀ ದ್ವಯರ ಭಾವಚಿತ್ರದ ಮೆರವಣಿಗೆ...
ಹಾವೇರಿ: ಹುಕ್ಕೇರಿ ಮಠದ ಶಿವಬಸವ ಶಿವಯೋಗಿಗಳ 68ನೇ ಹಾಗೂ ಶಿವಲಿಂಗ ಶ್ರೀಗಳ 5ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶ್ರೀ ದ್ವಯರ ಭಾವಚಿತ್ರಗಳ ಭವ್ಯ ಮೆರವಣಿಗೆ ಶನಿವಾರ ನಗರದಲ್ಲಿ ನಡೆಯಿತು. ಬೆಳಗ್ಗೆ 8 ಗಂಟೆಗೆ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಮಹಾಗಣಾರಾಧನೆ ಬಳಿಕ ಮೆರವಣಿಗೆ ಆರಂಭವಲಾಯಿತು. ಭಕ್ತರು ಪುಷ್ಪಾರ್ಚನೆ ಮಾಡಿ, ನಮಿಸಿದರು. ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶಿರಬಡಗಿ ವಿಜಯ ಮಹಾಂತೇಶ್ವರ ಭಜನಾ ತಂಡ, ನಂದಿಶ್ವರ ವೀರಗಾಸೆ ನೃತ್ಯ ಕಲಾ ತಂಡ, ನಂದಿಕೋಲು, ಡೊಳ್ಳುಕುಣಿತ, ಪೂಜಾ ಕುಣಿತ, ತಾಶಾರಾಮ ಡೋಲು ವಾದನ, ಗೊಂಬೆಮೇಳ ಕೋಮಸಾಗರ, ಸಾಹಸ ಮೇಳ, ಮಹಿಳಾ ತಮಟೆ ಮೇಳ, ಎನ್. ಗೋವಿಂದರಾಜ ನಾದಸ್ವರ ಮಂಗಳವಾದ್ಯ, ಹನುಮಾನ ಬ್ಯಾಂಡ್, ಸಮಾಳ ಮೇಳ, ವೀರಗಾಸೆ ಮೆರವಣಿಗೆಗೆ ಮೆರುಗು ನೀಡಿದವು.