ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಾಧನೆ ಮೂಲಕ ಸ್ಥಾನ: ಬಿಇಒ

Rashmi Kasaragodu
Updated On : 12 Jan 2014, 1:58 am

ಹಾವೇರಿ: ಜೀವನದಲ್ಲಿ ಸಾಧನೆ ಮೂಲಕ ಸ್ಥಾನ ಪಡೆಯಬೇಕು. ಇದಕ್ಕೆ ಮನಸ್ಸು ಬೇಕು. ಮನಸ್ಸಿಗೆ ಅಗಾಧವಾದ ಶಕ್ತಿಯಿದೆ ಎಂದು ಬಿಇಒ ಎಂ.ಬಿ. ಅಂಬಿಗೇರ ಹೇಳಿದರು. ತಾಲೂಕಿನ ನಾಗನೂರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ, ಗ್ರಾಪಂ ಹಾಗೂ ಶಾಲಾ ಶಿಕ್ಷಕರು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ಶಿಕ್ಷಣ ಎಲ್ಲ ಮಕ್ಕಳ ಹಕ್ಕು. ಸರ್ಕಾರದ ಯೋಜನೆಗಳು ಬಡ ವಿದ್ಯಾರ್ಥಿಗಳಿಗೆ ಸಹಾಯಕವಾಗಿವೆ ಎಂದರು. ಗ್ರಾಪಂ ಸದಸ್ಯ ಹನಮಂತಗೌಡ ಕಟ್ಟೇಗೌಡ್ರ ಮಾತನಾಡಿ, ಶಾಲೆ ಅಭಿವೃದ್ಧಿಗಾಗಿ ಆಟದ ಮೈದಾನ, ಕುಡಿಯುವ ನೀರಿನ ಸೌಲಭ್ಯವನ್ನು ಗ್ರಾಪಂನಿಂದ ನೀಡಲಾಗಿದೆ. ಶಾಲೆಗೆ 3 ಕೊಠಡಿ ಅಗತ್ಯವಿದೆ ಎಂದರು. ಗ್ರಾಪಂ ಸದಸ್ಯ ಹೊಳೆಯಪ್ಪ ಸಿಂಗಾಪುರ, ಎಸ್ಡಿಎಂಸಿ ಅಧ್ಯಕ್ಷ ಪುಟ್ಟಪ್ಪ ಓಂಕಾರಣ್ಣನವರ, ಬಿಆರ್ಸಿ ಎನ್.ಜೆ. ಹಿರೇಮಠ, ಸಿಆರ್ಪಿ ಆರ್.ಸಿ.ವರ್ದಿ ಇದ್ದರು. ಮುಖ್ಯಶಿಕ್ಷಕ ಆರ್.ಎನ್. ಕರ್ಜಗಿ ಸ್ವಾಗತಿಸಿದರು. ಸಿ.ಜಿ. ಬ್ಯಾಡಗಿ ನಿರೂಪಿಸಿದರು. ಬಿ.ಆರ್. ನದಾಫ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement