ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸೌಹಾರ್ದ ಕ್ರಿಕೆಟ್: ಪ್ರೆಸ್ ಕ್ಲಬ್ ತಂಡಕ್ಕೆ ಜಯ

Rashmi Kasaragodu
Updated On : 12 Jan 2014, 2:08 am

ಹಾವೇರಿ: ಬಿಜೆಪಿ ಪದಾಧಿಕಾರಿಗಳು-ಮುದ್ರಣ ಮಾಧ್ಯಮ ತಂಡಗಳ ನಡುವಿನ ಸೌಹಾರ್ದ ಕ್ರಿಕೆಟ್ ಪಂದ್ಯದಲ್ಲಿ ಮಾಧ್ಯಮ ತಂಡ 3 ವಿಕೆಟ್ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟ್ ಮಾಡಿದ ಬಿಜೆಪಿ ತಂಡ ನಿಗದಿತ 8 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 47 ರನ್ ಸೇರಿಸಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಎಂಎಲ್ಸಿ ಸೋಮಣ್ಣ ಬೇವಿನಮರದ 4, ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ 1 ರನ್ ಗಳಿಸಿದರು. ಸಿದ್ದರಾಜ ಕಲಕೋಟಿ 7, ಪ್ರಭು ಹಿಟ್ನಳ್ಳಿ 4, ಇಮಾಮ್ ಸಾಬ್ ಹಿರೆಮುಗದೂರ 22 ರನ್ ಗಳಿಸಿ ತಂಡದ ಗೌರವಾರ್ಹ ಮೊತ್ತಕ್ಕೆ ಕಾರಣರಾದರು. ಜಯದ ಗುರಿ ಬೆನ್ನತ್ತಿದ ಮುದ್ರಣ ಮಾಧ್ಯಮ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಮಹಾಂತೇಶ ಮೊದಲ ಓವರ್ನಲ್ಲೇ ಪೆವಿಲಿಯನ್ ಸೇರಿದರು. ವಿಜಯ ಹೂಗಾರ 13, ದೀಪಕ್ ಹೆಗಡೆ 4, ವೀರೇಶ ಮಡ್ಲೂರ 4, ಪರಶುರಾಮ ಕೇರಿ 2, ಶಿವಾನಂದ ಗೊಂಬಿ 2, ನಾರಾಯಣ ಹೆಗಡೆ 7 ರನ್ ಗಳಿಸಿದರು. ಕೊನೆಯ ಓವರ್ನಲ್ಲಿ ಗೆಲ್ಲಲು 8 ರನ್ ಬೇಕಿತ್ತು. ನಾಯಕ ಮಾಲತೇಶ ಅಂಗೂರ ಬೌಂಡರಿ ಬಾರಿಸಿ, ಗೆಲುವು ಖಾತ್ರಿಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement