ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಸಿಗಲಿ

Lingaraj Badiger
Updated On : 13 Jan 2014, 12:44 pm

ಕನ್ನಡಪ್ರಭ ವಾರ್ತೆ, ಸವಣೂರು, ಜ. 12
ತಾಲೂಕಿನ ಈಚಲಯಲ್ಲಾಪುರ ಮರದಮ್ಮ ದೇವಿ ಕಲಾ ಮತ್ತು ಹವ್ಯಾಸಿ ಸಂಘದ ಆಶ್ರಯದಲ್ಲಿ ರಾಜ್ಯ ಮಟ್ಟದ ಮುಕ್ತ ಕಬಡ್ಡಿ ಪಂದ್ಯಾವಳಿ ಈಚೆಗೆ ಜರುಗಿತು.
ಸ್ಥಳೀಯ ಗ್ರಾಪಂ ಅಧ್ಯಕ್ಷ ಬಸವರಾಜ ಕೋಳಿವಾಡ ಪಂದ್ಯಾವಳಿ ಉದ್ಘಾಟಿಸಿದರು. ಶ್ರೀಧರ ದೊಡ್ಡಮನಿ ಪಾಲ್ಗೊಂಡು ಮಾತನಾಡಿ, ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹದ ಅಗತ್ಯವಿದೆ. ಅನೇಕ ಹಳ್ಳಿ ಕ್ರೀಡೆಗಳು ಅವಸಾನದ ಅಂಚಿನಲ್ಲಿವೆ. ಆದ್ದರಿಂದ ಪಂದ್ಯಾವಳಿ ನಡೆಸಿ ಅವುಗಳನ್ನು ಉಳಿಸಿ, ಬೆಳೆಸಲು ಯುವಕರು ಮುಂದಾಗಬೇಕು ಎಂದು ಹೇಳಿದರು.
ತಾಪಂ ಸದಸ್ಯ ರಾಜಶೇಖರ ಮಾದರ ಮಾತನಾಡಿ, ಹಳ್ಳಿಗಳಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಂಡಿದ್ದು ಸ್ವಾಗತಾರ್ಹ. ಗ್ರಾಮೀಣ ಭಾಗದಲ್ಲಿ ಪಂದ್ಯಾವಳಿ ಸಂಘಟಿಸಲು ಮುಂದಾಗಬೇಕು ಎಂದರು.
ಹಿರೇಮರಳಿಹಳ್ಳಿ ಗ್ರಾಪಂ ಅಧ್ಯಕ್ಷೆ ರಸ್ತೂರೆವ್ವ ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ರೆಡ್ಡಿ, ಕಿರಣಕುಮಾರ, ಮಂಜು ರೆಡ್ಡಿ, ಮಲ್ಲೇಶಪ್ಪ ಮತ್ತೂರು, ಬಸವ್ವ ಆಡಿನ, ಯಲ್ಲವ್ವ ಭಜಂತ್ರಿ, ಗುಡ್ಡಪ್ಪ ಬಣಕಾರ, ಲಕ್ಷ್ಮಣ ಹಟ್ಟಿ, ಸಿದ್ದಪ್ಪ ಈರಗೊಂಡ, ನಾಗೇಂದ್ರಪ್ಪ ಚಳ್ಳಾಳ ಇದ್ದರು. ಈ ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಗಳಿಂದ ಒಟ್ಟು 35 ತಂಡಗಳು ಪಾಲ್ಗೊಂಡಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement