ಮತಾಂತರದಿಂದ ದೇಶ ದುರ್ಬಲ
ರಾಣಿಬೆನ್ನೂರು: ಹಿಂದೂಗಳ ಮತಾಂತರ ದೇಶವನ್ನು ದುರ್ಬಲಗೊಳಿಸುತ್ತದೆ. ದೇಶದ್ರೋಹಿಗಳ ಸಂಖ್ಯೆಯೂ ಹೆಚ್ಚುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಘೋಷ್ ಪ್ರಮುಖ ಶ್ರೀನಿವಾಸ್ ಹೇಳಿದರು.
ಸ್ವಾಮಿ ವಿವೇಕಾನಂದರ 151ನೇ ಜನ್ಮದಿನದ ಪ್ರಯುಕ್ತ ಇಲ್ಲಿನ ಅಂಚೆ ವೃತ್ತದಲ್ಲಿ ವೀರ ಸನ್ಯಾಸಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಅವರು, ನಮ್ಮೆಲ್ಲರ ಮನಸ್ಸಿನಲ್ಲೂ ದೇಶಾಭಿವೃದ್ಧಿಯ ಕನಸು ಮೊಳೆಯಬೇಕು. ಚಿಕಾಗೋ ಸಮ್ಮೇಳನದಲ್ಲಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಸಾರಿದ ವಿವೇಕಾನಂದರ ವಿಚಾರಧಾರೆಗಳನ್ನು ಅರಿತು, ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಶೋಕ ನಾಡಿಗೇರ, ಈಶ್ವರ ಹಾವನೂರು, ಬಿಂದುಮಾಧವ ನಾಡಿಗೇರ, ಸಂಕಪ್ಪ ಮಾರನಾಳ, ಜಿ.ಜಿ. ಹೊಟ್ಟಿಗೌಡ್ರ, ಪ್ರವೀಣ ಕೋರ್ಪಡೆ, ವೀರಣ್ಣ ಅಂಗಡಿ, ಭಾರತಿ ಜಂಬಗಿ, ಮೈತ್ರಾ ಹದಡಿ ಇದ್ದರು.