ಉತ್ತಮ ಶಿಕ್ಷಣದಿಂದ ಸಮೃದ್ಧಿ: ಶಿವಣ್ಣನವರ
ಬ್ಯಾಡಗಿ: ಉತ್ತಮ ಶಿಕ್ಷಣ ಪಡೆದು, ಸಮೃದ್ಧ ರಾಷ್ಟ್ರದ ಕನಸು ನನಸಾಗಿಸಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು. ಎಸ್ಜೆಜೆಎಂ ಸರ್ಕಾರಿ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ಗಳನ್ನು ವಿತರಿಸಿ, ಉನ್ನತ ಗುರಿಯಿದ್ದರೆ ಸಾರ್ಥಕತೆ ಹೊಂದಲು ಸಾಧ್ಯ ಎಂದರು. ಶಿಕ್ಷಕಿ ರೂಪಾ ಸಜ್ಜನ ಪ್ರಾಸ್ತಾವಿಕ ಮಾತನಾಡಿದರು. ಉಪ ಪ್ರಾಚಾರ್ಯ ಜಿ.ಆರ್. ಬೋಡಕೆ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ಮಂಜುನಾಥ ಭೋವಿ, ಬಿಇಒ ಪ್ರಸನ್ನಕುಮಾರ್, ಮುಖ್ಯಾಧಿಕಾರಿ ಜಿ.ಟಿ. ವೀರೇಶಕುಮಾರ್, ಎಚ್.ಎಚ್. ದೊಡ್ಮನಿ, ಸುರೇಶಗೌಡ ಪಾಟೀಲ, ದತ್ತು ಸಾಳುಂಕೆ, ಪ್ರಾಚಾರ್ಯ ಬಸವರಾಜಪ್ಪ ಇದ್ದರು. ಮಲ್ಲಿಕಾರ್ಜುನ ಹಾವೇರಿ ಸ್ವಾಗತಿಸಿದರು. ಎಸ್.ಬಿ. ಇಮ್ಮಡಿ ನಿರೂಪಿಸಿದರು. ಐ.ಎಸ್. ಅಕ್ಕಿ ವಂದಿಸಿದರು.