ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶರಣರ ಜೀವನಾನುಭವಗಳೇ ವಚನ

Rashmi Kasaragodu
Updated On : 14 Jan 2014, 1:09 am

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜ. 13
12ನೇ ಶತಮಾನದಲ್ಲಿ ಬಾಳಿ ಬದುಕಿದ ಶರಣರು ತಮ್ಮ ಜೀವನದ ಅನುಭವಗಳನ್ನು ದಾಸ ಪದ, ಕೀರ್ತನೆ, ವಚನಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಅವುಗಳಲ್ಲಿರುವ ತತ್ವ ಆದರ್ಶಗಳನ್ನು ಇಂದಿನವರು ನಿಜ ಜೀವನದಲ್ಲಿ ಅಳವಡಿಸಿಕೊಂಡು ಸುಸಂಸ್ಕೃತರಾಗಿ ಬದುಕಬೇಕು ಎಂದು ಶಾಸಕ ಯು.ಬಿ. ಬಣಕಾರ ಕರೆ ನೀಡಿದರು.
ಅವರು ಪಟ್ಟಣದ ಗುರುಭವನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಏರ್ಪಡಿಸಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅನಾವಶ್ಯಕ ಕಾಲ ಕಳೆಯುವುದು ಸರಿಯಲ್ಲ, ಸಿದ್ಧರಾಮೇಶ್ವರರಂತೆ ಕ್ರಿಯಾಶೀಲರಾಗಿ, ಶ್ರಮ ವಹಿಸಿ ನಾಡು ಕಟ್ಟಿ ಎಂದರು.
ತಹಸೀಲ್ದಾರ್, ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷರಾದ ಶಕುಂತಲಾ ಚೌಗುಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವಣ್ಣ, ಅಕ್ಕಮಹಾದೇವಿ, ಅಂಬೇಡ್ಕರ್ ಮೊದಲಾದ ಮಹಾನುಭಾವರು ಯಾವುದೇ ಜಾತಿ, ಕುಲ, ಪಂಗಡಕ್ಕೆ ಸೇರಿದವರಲ್ಲ. ಇಡೀ ಮನುಕುಲದ ಉದ್ಧಾರಕ್ಕೆ ಹಗಲಿರುಳು ಶ್ರಮಿಸಿ, ಜೀವನ ತ್ಯಾಗ ಮಾಡಿದರು. ಅವರು ತಮ್ಮ ವಚನ, ಕೀರ್ತನೆ ಹಾಗೂ ಅನುಭವಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಸಮಾಜ ಸುಧಾರಣೆ ಮಾಡಿದ್ದಾರೆ ಎಂದರು.
ಜಿಪಂ ಸದಸ್ಯರಾದ ಬಸಮ್ಮ ಅಬಲೂರ, ಸುಜಾತಾ ಕೊಟಗಿಮನಿ, ತಾಪಂ ಸದಸ್ಯ ಸಣ್ನಗೌಡ ಪಾಟೀಲ್, ಪಪಂ ಅಧ್ಯಕ್ಷ ಶಿವಲೀಲಾ ಎಸ್.ಆರ್., ಉಪಾಧ್ಯಕ್ಷ ಮಹೇಂದ್ರ ಬಡಳ್ಳಿ, ಸದಸ್ಯರಾದ ಗೀತಾ ದಂಡಗಿಹಳ್ಳಿ, ಮಮತಾ ಮಳವಳ್ಳಿ, ರಮೇಶ ತೊರನಗಟ್ಟಿ, ನಾಗರಾಜ ಗುಡ್ಡಳ್ಳಿ, ಮುಜೀಬ್, ಮಹಮ್ಮದ ವಡ್ಡಿನಕಟ್ಟಿ, ಶಿವು ತಿಪ್ಪಶೆಟ್ಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಂ. ಜನವಾಡ, ಸಿಪಿಐ ಯೋಗೇಶ, ಮುಖಂಡರಾದ ಗದಿಗೆಪ್ಪ ಕಿರವಾಡಿ  ಉಪಸ್ಥಿತರಿದ್ದರು.
ಪಟ್ಟಣದ ಜಿ.ಬಿ. ಶಂಕರರಾವ್ ವೃತ್ತದಿಂದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರದ ಮೆರವಣಿಗೆ ಸಕಲ ವಾದ್ಯಗಳೊಂದಿಗೆ ಅದ್ಧೂರಿಯಾಗಿ ನಡೆಯಿತು. ಕ್ಷೇತ್ರ ಸಮನ್ವಯ ಅಧಿಕಾರಿ ಎನ್. ಸುರೇಶ್ಕುಮಾರ ಸ್ವಾಗತಿಸಿದರು. ಪಿ.ಬಿ. ನಿಂಗನಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement