ಶೋಷಣೆ ವಿರುದ್ಧ ದನಿಯಾದ ಶಿವಯೋಗಿ
ಶಿಗ್ಗಾಂವಿ: ಶೋಷಣೆ ಹಾಗೂ ತಾರತಮ್ಯ ನಿವಾರಣೆಗಾಗಿ ಶ್ರಮಿಸಿದ ಶರಣರಲ್ಲಿ ಗುರು ಸಿದ್ಧರಾಮೇಶ್ವರರು ಅಗ್ರಗಣ್ಯರೆಂದು ಜಿಪಂ ಸದಸ್ಯ ಶಶಿಧರ ಹೊನ್ನಣ್ಣವರ ಹೇಳಿದರು.
ತಹಸೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡ ಗುರು ಸಿದ್ಧರಾಮೇಶ್ವರರ 841ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರ್ಜುನ ಜಿ. ಹಂಚಿನಮನಿ ಅಧ್ಯಕ್ಷತೆ ವಹಿಸಿದ್ದರು. ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹನುಮಂತ ಎನ್. ಬಂಡಿವಡ್ಡರ, ತಹಸೀಲ್ದಾರ್ ಎಸ್.ಎ. ಚೌಗುಲೆ ಮಾತನಾಡಿದರು. ಪ್ರೊ ಶಿವಪ್ರಕಾಶ ಬಳಿಗಾರ ಉಪನ್ಯಾಸ ನೀಡಿದರು. ರಾಮು ಪೂಜಾರ, ಪುರಸಭೆ ಸದಸ್ಯರಾದ ಫಕ್ಕೀರೇಶ ಶಿಗ್ಗಾಂವ, ಪರಶುರಾಮ ಸೊನ್ನದ, ಜಯಕರ್ನಾಟಕ ತಾಲೂಕು ಅಧ್ಯಕ್ಷ ದುರುಗಪ್ಪ ಎನ್. ವಡ್ಡರ, ಪುರಸಭೆ ಮುಖ್ಯಾಧಿಕಾರಿ ಪಿ.ಎಂ. ಚನ್ನಪ್ಪನವರ, ಶಿಗ್ಗಾಂವಿ ಪಿಎಸ್ಐ ಜಿ.ಎಂ. ಶಶಿಧರ, ಮಂಜುನಾಥ ಗುಡಗೇರಿ, ಮಹೇಶ ಕುರಂದವಾಡ, ಮುತ್ತಣ್ಣ ಕಟ್ಟಿಮನಿ, ಹನುಮಂತಪ್ಪ ರಾಮನಕೊಪ್ಪ, ಹನುಮಂತಪ್ಪ ತಿಮ್ಮನಕೊಪ್ಪ, ಮಲ್ಲೇಶಪ್ಪ ಕುರಂದವಾಡ, ಬಸಣ್ಣ ವಡ್ಡರ, ನಾಗರಾಜ ವಡ್ಡರ, ಫಕ್ಕೀರಪ್ಪ ಕಟ್ಟಿಮನಿ ಇದ್ದರು.