ಸಿರಸಂಗಿ ಲಿಂಗರಾಜರ ಜಯಂತಿ
ರಾಣಿಬೆನ್ನೂರು: ನಗರದ ಬಸ್ ನಿಲ್ದಾಣದ ಸಮೀಪವಿರುವ ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನಲ್ಲಿ ತ್ಯಾಗವೀರ ಸಿರಸಂಗಿ ಲಿಂಗರಾಜರ 153ನೇ ಜಯಂತಿಯನ್ನು ಆಚರಿಸಲಾಯಿತು. ಪಿಯು ಕಾಲೇಜಿನ ಉಪನ್ಯಾಸಕ ವೈ.ಪಿ. ತಳವಾರ, ಸಿರಸಂಗಿ ಲಿಂಗರಾಜರ ಬಗ್ಗೆ ಉಪನ್ಯಾಸ ನೀಡಿದರು. ಕೆಎಲ್ಇ ಶಿಕ್ಷಣ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಉಪಾಧ್ಯಕ್ಷ ವಿ.ಪಿ. ಲಿಂಗನಗೌಡ್ರ, ಸದಸ್ಯರಾದ ಜೆ.ಸಿ. ಹುಲ್ಮನಿ, ಎಂ.ವಿ. ಯಲಿಗಾರ, ಎಫ್.ಎನ್. ಗುಡಿಕಟ್ಟಿ ಮಾತನಾಡಿದರು. ಎಲ್.ಬಿ. ಅಂಜೇರ, ಅನಿಲ ದಂಡಗಿ,ಪಿ. ಪ್ರಹ್ಲಾದ, ಕೆ.ಎಸ್. ಪಾಟೀಲ, ಶಾಲಿನಿ ನಾಯ್ಕ ಇದ್ದರು