ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಳಸೂರ ದೇವಿ ಜಾತ್ರೆ ಆರಂಭ

Mainashree
Updated On : 15 Jan 2014, 11:41 am

ಸವಣೂರು: ತಾಲೂಕಿನ ಕಳಸೂರ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ (ಮಾಯಮ್ಮ ದೇವಿ) ದೇವಸ್ಥಾನದ ಜಾತ್ರಾ ಮಹೋತ್ಸವ ಮಂಗಳವಾರ ಆರಂಭಗೊಂಡಿದ್ದು, ಮೂರು ದಿನಗಳ ಪರ್ಯಂತ ಜರುಗಲಿದೆ. ಶತಮಾನೋತ್ಸವ ಆಚರಿಸುತ್ತಿರುವ ಜಾತ್ರೆಯಲ್ಲಿ ಮಂಗಳವಾರ ಬೆಳಗ್ಗೆ ಅಭಿಷೇಕ, ಎಲೆ ಪೂಜೆ, ಡೊಳ್ಳು, ಭಜನೆಗಳೊಂದಿಗೆ ಪಲ್ಲಕ್ಕಿ ಸೇವೆ, ಉಡಿ ತುಂಬುವ ಕಾರ್ಯಕ್ರಮಗಳು ನೆರವೇರಿದವು. ಜ. 15ರಂದು ಬಂಡಿ ಉತ್ಸವ, ಎತ್ತಿನ ಮಜಲು ನೆರವೇರಲಿದ್ದು, ಸಂಜೆ 4 ಗಂಟೆಗೆ ದೇವಸ್ಥಾನದ ಆವರಣದಿಂದ ದೇವಿಯ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜ. 16ರಂದು ಬೆಳಗ್ಗೆ ಓಕುಳಿ ಗುಂಡಿಗೆ ನೀರು ತುಂಬುವುದು, ಸಂಜೆ ಪಲಕ್ಕಿ ಸೇವೆಯೊಂದಿಗೆ ಓಕುಳಿ, ಆನೆ ಬಂಡಿ ಉತ್ಸವ ಆಚರಿಸಲಾಗುತ್ತದೆ. ಬಳಿಕ ಓಕುಳಿ ನಡೆಯಲಿದೆ.  ಜಾತ್ರೆ ಅಂಗವಾಗಿ ಜ. 15ರಂದು ಬೆಳಗ್ಗೆ 9 ಗಂಟೆಗೆ ಯುವಕರ ಸುರಕ್ಷತಾ ಜಾಗೃತಿಗಾಗಿ ಗ್ರಾಮದ ಶಾಲೆ ಆವರಣದಲ್ಲಿ ಸ್ಲೋ ಬೈಕ್ ಸ್ಪರ್ಧೆ ಆಯೋಜಿಸಲಾಗಿದೆ.ಮಕ್ಕಳ ಹಬ್ಬದ ಅಂಗವಾಗಿ ವೇಷ ಭೂಷಣ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ಸಂಜೆ ಸಾಧಕರ ಸನ್ಮಾನವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement