ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಖಾಲಿ ಜಾಗೆಯಲ್ಲಿ ಕಾಡು ಗಿಡ ಬೆಳೆಸಿ: ಪೀರಜಾದೆ

Mainashree
Updated On : 15 Jan 2014, 11:29 am

ಶಿಗ್ಗಾಂವಿ: ಗ್ರಾಮ ಅರಣ್ಯ ಸಮಿತಿ ಮೂಲಕ ಖಾಲಿ ಭೂಮಿಯಲ್ಲಿ ಕಾಡು ಬೆಳೆಸುವುದು ಅಗತ್ಯವಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಂ. ಪಿರಜಾದೆ ಹೇಳಿದರು. ತಾಲೂಕಿನ ದುಂಡಶಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಂವಾದಾತ್ಮಕ ಕಾರ್ಯಾಗಾರ ಉದ್ಘಾಟಿಸಿದ ಅವರು, ಅರಣ್ಯದಲ್ಲಿ ಬೆಂಕಿ, ಕಟ್ಟಿಗೆ ಕಳ್ಳಸಾಗಾಟ, ಕಾಡುಪ್ರಾಣಿಗಳ ಬೇಟೆ ಇತ್ಯಾದಿಗಳನ್ನು ತಕ್ಷಣ ಇಲಾಖೆಯ ಗಮನಕ್ಕೆ ತಂದು ತಡೆಗಟ್ಟಬೇಕು. ಅರಣ್ಯ ಸಮಿತಿಯವರು ಅರಣ್ಯ ಹಾಗೂ ಗಿಡಗಳು, ಉತ್ಪನ್ನಗಳ ಕುರಿತು ಮಾಹಿತಿ ತಿಳಿದಿರಬೇಕು. ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದರು.
ವಲಯ ಅರಣ್ಯಾಧಿಕಾರಿ ಬಿ.ವೈ. ಇಳಿಗೇರ ಪ್ರಾಸ್ತಾವಿಕ ಮಾತನಾಡಿದರು. ವಿವಿಧ ಗ್ರಾಮ ಅರಣ್ಯ ಸಮಿತಿಗಳ ಅಧ್ಯಕ್ಷರಾದ ಮಾಬೂಸಾಬ ಜಿಗಳೂರ, ಲೋಕನಗೌಡ ಪಾಟೀಲ, ಎಸ್.ಸಿ. ಹಿರೇಮಠ, ಸಂಪನ್ಮೂಲ ವ್ಯಕ್ತಿ ಡಿ.ಟಿ. ಹುಲಿಕಟ್ಟಿ, ಎ.ಎ. ಕಿಲ್ಲೇದಾರ ಮಾತನಾಡಿದರು. ನ್ಯಾಯವಾದಿ ಶಿವನಗೌಡ ಪಾಟೀಲ, ನಿವೃತ್ತ ವಲಯ ಅರಣ್ಯಾಧಿಕಾರಿ ವಿ.ಎಂ. ಪಾಟೀಲ ಇದ್ದರು. ಎಂ.ಡಿ. ಬಾಗೇವಾಡಿ ಸ್ವಾಗತಿಸಿದರು. ಸುರೇಶ ಬಟ್ಟೂರ ನಿರೂಪಿಸಿದರು. ಎಚ್.ಎನ್. ಸುಣಗಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement