ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬೆಲೆಯೇರಿಕೆ: ಕಾರ್ಮಿಕ ಪ್ರತಿಭಟನೆ

Mainashree
Updated On : 15 Jan 2014, 11:41 am

ಶಿಗ್ಗಾಂವಿ: ಪಡಿತರ ಆಹಾರ ಧಾನ್ಯಗಳು, ಅಡುಗೆ ಅನಿಲ ದರವನ್ನು ಏರಿಸಿದ್ದರಿಂದ ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ರಾಜ್ಯ ಕಾರ್ಮಿಕ ಹಿತರಕ್ಷಣಾ ಜಾಗೃತ ವೇದಿಕೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಎಸ್.ಎ. ಚೌಗುಲೆ ಅವರಿಗೆ ಮನವಿ ಸಲ್ಲಿಸಿದ್ದಾರೆ.
ವೇದಿಕೆ ರಾಜ್ಯಾಧ್ಯಕ್ಷ ಫಕ್ಕೀರೇಶ ಶಿಗ್ಗಾಂವಿ ಮಾತನಾಡಿ, ಪಡಿತರ ಆಹಾರ ಧಾನ್ಯಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ. ರೇಷನ್ ಬಂದ ಎರಡು-ಮೂರು ದಿನಗಳಲ್ಲೇ ಖಾಲಿಯಾಗುತ್ತದೆ. ಕಾರ್ಡ್ ಚಾಲ್ತಿಯಲ್ಲಿದ್ದರೂ ಪಡಿತರ ನೀಡುತ್ತಿಲ್ಲ. ಅಸಂಘಟಿತ ವಲಯದ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸವನ್ನೂ ಕೊಡುತ್ತಿಲ್ಲ ಎಂದು ದೂರಿದರು.
ಪಟ್ಟಣದಲ್ಲಿ ಬೆಳಗ್ಗೆಯೇ ಬಾರ್‌ಗಳು ಚಾಲೂ ಆಗುತ್ತವೆ. ದುಡಿಯಲು ಹೋಗಬೇಕಾದ ಕಾರ್ಮಿಕರು ಕುಡಿತಕ್ಕೆ ಶರಣಾಗುತ್ತಿದ್ದಾರೆ. ಮುಂಜಾನೆ ಓಡಾಡುವ ಮಹಿಳೆಯರು ಹಾಗೂ ಮಕ್ಕಳಿಗೂ ಇದರಿಂದ ತೊಂದರೆಯಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್. ಓಲೇಕಾರ, ತಾಲೂಕು ಅಧ್ಯಕ್ಷ ಜೀಲಾನಿ ಜಂಗ್ಲಿ, ಉಪಾಧ್ಯಕ್ಷ ಇಮಾಮ ಹುಸೇನ ಆದಂಬಾಯಿ, ನಾಗರಾಜ ಕುರವತ್ತಿ, ಸೈಯದ್ ಖಲಂದರ ಚಾಕಾಪುರ, ಪುರಸಭೆ ಸದಸ್ಯ ಸುಭಾಷ ಚವ್ಹಾಣ, ಮೃತ್ಯುಂಜಯ ಕಟ್ಟಿಮನಿ, ದುರ್ಗಪ್ಪ ವಡ್ಡರ, ನಿಂಗವ್ವ ಮಾಡಗೇರಿ, ಶೋಭಾ ಬಡಿಗೇರ, ಜಯಮ್ಮ ಗುಳೇದ, ಸಿದ್ದಮ್ಮ ಗುಳೇದ, ರಾಜು ಲಮಾಣಿ, ಯಲ್ಲಪ್ಪ ವಡ್ಡರ, ಅತಾವುಲ್ಲಾ ಖಾಜಾಕಾನ, ಗೌಸ ಅಗಸನಮಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement