ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬ್ಯಾಂಕಿಂಗ್ ಸಾಕ್ಷರತೆಗಾಗಿ ಯಕ್ಷಗಾನ

Mainashree
Updated On : 15 Jan 2014, 11:30 am

ಶಿಗ್ಗಾಂವಿ: ಗ್ರಾಮೀಣ ಜನರು ಬ್ಯಾಂಕ್ ಖಾತೆ ಮಾಡಿಸಿಕೊಂಡು ಸರ್ಕಾರದ ಯೋಜನೆಗಳ ಪೂರ್ಣ ಪ್ರಯೋಜನ ಪಡೆಯಬೇಕೆಂದು ಹಾವೇರಿಯ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಎಂ.ಎನ್. ಗಣೇಶ ಸಲಹೆ ನೀಡಿದರು.
ಹುಲಗೂರ ಗ್ರಾಮದ ಓಲೇಮಠದಲ್ಲಿ (ಜಮಖಂಡಿಮಠ) ಸೋಂದಾದ ಶಬರ ಸಂಸ್ಥೆ ಆಶ್ರಯದಲ್ಲಿ ನಡೆದ ಬ್ಯಾಂಕಿಂಗ್ ಸಾಕ್ಷರತೆಗಾಗಿ ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಸೂರ್ಯಕಾಂತ ಗಂಗಾ ಮಾತನಾಡಿ, ಯಕ್ಷಗಾನ ಕರಾವಳಿಯ ಶ್ರೀಮಂತ ಕಲೆ. ಆರ್ಥಿಕ ಸಾಕ್ಷರತೆ ಹಾಗೂ ಸೌಲಭ್ಯಗಳ ಅರಿವಿಗಾಗಿ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಹುಲಗೂರ ಗ್ರಾಪಂ ಅಧ್ಯಕ್ಷೆ ಮೆಹರಬೀ ನೇರ್ತಿ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಸದಸ್ಯ ಲಕ್ಷ್ಮಣ ಹೊನ್ನಣ್ಣನವರ, ಕೆವಿಜಿ ಬ್ಯಾಂಕ್ ಹಾವೇರಿ ಪ್ರಾದೇಶಿಕ ವ್ಯವಸ್ಥಾಪಕ ಕೆ. ಪಾಂಡುರಂಗ, ಗ್ರಾಪಂ ಉಪಾಧ್ಯಕ್ಷೆ ರತ್ನವ್ವ ಪಿ. ಸಂಶಿ, ಸದಸ್ಯರಾದ ಶೇಖಣ್ಣ ಗಣಾಚಾರಿ, ಚಂದ್ರಪ್ಪ ಆಚೇಬಣದ, ಪಿಡಿಒ ಸಿ.ಬಿ. ಚರಂತಿಮಠ, ಕೆವಿಜಿ ಬ್ಯಾಂಕ್ ಹುಲಗೂರ ಶಾಖೆಯ ವಿ.ಎಸ್. ಕರಡಿ ಇದ್ದರು. ಯಕ್ಷಗಾನ ತಂಡದ ಜೋಷಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement