ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 15 Jan 2014, 11:30 am

ಅಗಡಿ: ರುದ್ರಮುನಿ ಶಿವಯೋಗಿಗಳ ಸ್ಮರಣೋತ್ಸವ ನಾಳೆ
ಹಾವೇರಿ: ತಾಲೂಕಿನ ಅಗಡಿ ಗ್ರಾಮದ ಪ್ರಭುಸ್ವಾಮಿ ಮಠದಲ್ಲಿ ರುದ್ರಮುನಿ ಶಿವಯೋಗಿಗಳವರ 54ನೇ ಪುಣ್ಯಸ್ಮರಣೋತ್ಸವ ಜ. 16ರಿಂದ 18ರ ವರೆಗೆ ನಡೆಯುವುದು. ಜ. 16ರಂದು ಸಂಜೆ 7 ಗಂಟೆಗೆ ಧರ್ಮಸಭೆ ನಡೆಯಲಿದ್ದು, ಕಂಪ್ಲಿ, ಬೆಳ್ಳಟ್ಟಿ ಶ್ರೀಗಳು ಸಾನ್ನಿಧ್ಯ, ಹೊಳೆಇಟಗಿ, ಹೂವಿನಶಿಗ್ಲಿ, ಚಿಕ್ಕೇರೂರ ಶ್ರೀಗಳು ಸಮ್ಮುಖ ವಹಿಸಲಿದ್ದಾರೆ. ಲಿಂಗನಾಯ್ಕನಹಳ್ಳಿಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ತಹಸೀಲ್ದಾರ್ ಪಂಪನಗೌಡ ಮೇಲ್ಸೀಮೆ ಹಾಗೂ ಪಂಚಯ್ಯ ಆಗಮಿಸುವರು. ಆಕಾಶವಾಣಿ ಕಲಾವಿದೆ ಭಾಗ್ಯಶ್ರೀ ಕೊಂಡಬಾಳ ಅವರಿಂದ ವಚನ ಸಂಗೀತ ಹಾಗೂ ವಿಜಯಲಕ್ಷ್ಮೀ ಅಮರಾವತಿ ಅವರಿಂದ ವಚನ ನೃತ್ಯ ಪ್ರದರ್ಶನ ನಡೆಯುವುದು. ಜ. 17ರಂದು ಗುಲ್ಬರ್ಗದ ಹಾಸ್ಯಕಲಾವಿದ ರಾಚಯ್ಯಸ್ವಾಮಿ ಅವರಿಂದ ನಗೆಹಬ್ಬ. ಹಿರೇಸಿಂದೋಗಿ, ಹಾವನೂರ, ಮಹಲಿಂಗಪುರ, ಗೋಲಗೇರಿ ಶ್ರೀಗಳ ಸಾನ್ನಿಧ್ಯ ಹಾಗೂ ಹತ್ತಿಮತ್ತೂರ ಶ್ರೀಗಳ ಅಧ್ಯಕ್ಷತೆಯಲ್ಲಿ ನಡೆಯುವುದು. ಮಾಜಿ ಶಾಸಕರಾದ ನೆಹರೂ ಓಲೇಕಾರ, ಶಿವರಾಜ ಸಜ್ಜನ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಸಿ.ಎಸ್. ರಾಮನಗೌಡ್ರ, ಎಪಿಎಂಸಿ ಅಧ್ಯಕ್ಷ ಎಂ.ಎಂ. ಅಂಗಡಿ, ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ, ರಿಹನಾ ಚಾಂದಶೇಖ್, ಕೆ. ಕರಿಯಲ್ಲಪ್ಪ ಪಾಲ್ಗೊಳ್ಳುವರು. ಜ. 18ರಂದು ಅಕ್ಕಮಹಾದೇವಿ ಜಯಂತಿ ಅಮೃತ ಮಹೋತ್ಸವ ವರ್ಷಾಚರಣೆ ಸಮಾರೋಪ. ಹಂಸಭಾವಿ, ಹೆಬ್ಬಾಳ, ಹುಕ್ಕೇರಿಮಠ, ಹೊಸಮಠ ಶ್ರೀಗಳ ಸಮ್ಮುಖದಲ್ಲಿ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅಕ್ಕನ ವಚನ ಸಂದೇಶ ಕುರಿತು ಪ್ರವಚನ ಮಾಡುವರು. ಸವಣೂರು ಕಲ್ಮಠದ ಶ್ರೀಗಳು ಅಧ್ಯಕ್ಷತೆ ವಹಿಸುವರು. ದೂರದರ್ಶನ-ಆಕಾಶವಾಣಿ ಕಲಾವಿದ ಪ್ರಕಾಶ ಜೈನ್ ಅವರಿಂದ ಸಂಗೀತ ಸೇವೆ, ಸಂಜೆ ಲಿಂ. ಶ್ರೀಗುರು ರುದ್ರಮುನಿ ಮಹಾಶಿವಯೋಗಿಗಳ ಪುಷ್ಪ ರಥೋತ್ಸವ ನಡೆಯುವುದು ಎಂದು ಮಠಾಧ್ಯಕ್ಷ ಸಂಗನಬಸವ ಸ್ವಾಮೀಜಿ ತಿಳಿಸಿದ್ದಾರೆ.
ಇಂದು ಪುಣ್ಯಾರಾಧನೆ
ಮುಂಡರಗಿ:  ಡಂಬಳ ಗ್ರಾಮದ ಹಾಲೇಶ್ವರ ಮಠದ ಲಿಂ. ಶಿವಯ್ಯಜ್ಜನವರ ಹಾಗೂ ಲಿಂ. ಶಂಕ್ರಯ್ಯಜ್ಜ ಶ್ರೀಗಳ ಪುಣ್ಯಾರಾಧನೆ ಜ. 15ರಂದು ಜರುಗಲಿದೆ. ಬೆಳಗ್ಗೆ 7.30 ರಿಂದ 9.30ರ ವರೆಗೆ ರಾಜಶೇಖರಯ್ಯ ಹಿರೇಮಠ ನೇತೃತ್ವದಲ್ಲಿ ಶಿವಯ್ಯಜ್ಜ, ಶಂಕ್ರಯಜ್ಜನವರ ಗದ್ದುಗೆಗೆ ರುದ್ರಾಭಿಷೇಕ, ಪೂಜೆ ಜರುಗಲಿವೆ. ಮಧ್ಯಾಹ್ನ 1.30ಕ್ಕೆ ಮಹಾಪ್ರಸಾದ. ಸಂಜೆ 5ಕ್ಕೆ ಶಿವಯ್ಯಜ್ಜ ಹಾಗೂ ಶಂಕ್ರಯ್ಯಜ್ಜನವರ ಭಾವಚಿತ್ರ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.
ಇಂದು ಕವಿಗೋಷ್ಠಿ
ನರಗುಂದ: ಭೈರನಹಟ್ಟಿ ಗ್ರಾಮದ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಜ. 15ರಂದು ಸಂಜೆ 7 ಗಂಟೆಗೆ 222ನೇ ಮಾಸಿಕ ಶಿವಾನುಭವ, ಜಿ.ಎಸ್. ಶಿವರುದ್ರಪ್ಪಗೆ ನುಡಿನಮನ ಹಾಗೂ ಸಂಕ್ರಾಂತಿ ಕವಿಗೋಷ್ಠಿಯನ್ನು ಪಟ್ಟಣದ ದೊರೆಸ್ವಾಮಿ ವಿರಕ್ತಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಶಾಂತಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ಸಿ.ಎಸ್. ಸಾಲೂಟಗಿಮಠ, ಪ್ರಾ. ಆರ್.ಎಸ್. ಪವಾರ, ಎಸ್.ಎನ್. ಪೂಜಾರ, ಎಸ್.ಐ. ಜಕ್ಕಲಿ, ಎಂ.ಎಸ್. ಯಾವಗಲ್, ಹೆಬ್ಬಾಳ ವೀರೇಶ್ವರ ದೇವರು, ಪಿ.ಸಿ. ಕಲಹಾಳ ಪಾಲ್ಗೊಳ್ಳುವರು.
ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾಗಿ ನಾಸೀರ್ ಖಾನ್ ಆಯ್ಕೆ

ಹಾವೇರಿ: ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಹಾವೇರಿ ಲೋಕಸಭಾ ಯುವ ಕಾಂಗ್ರೆಸ್ ಸಮಿತಿಯ ಚುನಾವಣೆಯಲ್ಲಿ ನಾಸೀರ್ ಖಾನ್ ಪಠಾಣ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಾಸೀರ್ ಖಾನ್ 187 ಮತ ಗಳಿಸಿದರೆ, ಪ್ರತಿಸ್ಪರ್ಧಿ ಮಂಜು ಮುಳುಗುಂದ 180 ಮತ ಪಡೆದು ಉಪಾಧ್ಯಕ್ಷರಾಗಿ, 57 ಮತ ಪಡೆದ ಸಮೀರ ಪ್ಯಾಟಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಹಾವೇರಿ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಹುಸೇನ್ ಸಾಬ್ ಬಗರಿ, ಉಪಾಧ್ಯಕ್ಷರಾಗಿ ವಿಜಯ ಲಮಾಣಿ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಬೂದಗಟ್ಟಿ ಆಯ್ಕೆಯಾಗಿದ್ದಾರೆ.
ಬ್ಯಾಡಗಿ ವಿಧಾನಸಭಾ ಕ್ಷೇತ್ರಕ್ಕೆ ಸಮಿವುಲ್ಲಾ ಮಲ್ಲೂರ, ಶಿರಹಟ್ಟಿ ಕ್ಷೇತ್ರಕ್ಕೆ ಪರಮೇಶ ಲಮಾಣಿ ಅಧ್ಯಕ್ಷರಾದರೆ, ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಕಿಶೋರ ಸಣ್ಣಮನಿ, ಉಪಾಧ್ಯಕ್ಷರಾಗಿ ವೀರನಗೌಡ ಪಾಟೀಲ, ಗದಗ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಅಶೋಕ ಮಂದಾಲಿ, ಉಪಾಧ್ಯಕ್ಷರಾಗಿ ಸಂತೋಷ ಕಾಮನಹಳ್ಳಿ ಆಯ್ಕೆಯಾಗಿದ್ದಾರೆ.
ವೀರೇಂದ್ರಸಿಂಗ್ ಚುನಾವಣಾಧಿಕಾರಿಯಾಗಿದ್ದರು. ಯುವ ಕಾಂಗ್ರೆಸ್ ಮುಖಂಡರಾದ ವಾಸು ಸಾವುಕಾರ, ಇರ್ಫಾನ್ ದಿಡಗೂರ, ಗಂಗಾಧರ ಬಣಕಾರ, ಮಲ್ಲೇಶಪ್ಪ ಮಾದರ, ಎಂ.ಕೆ. ಮೋಹಿದ್ದೀನ್, ನಾಗರಾಜ ಮರಿಯಮ್ಮನವರ, ಶಿವಯೋಗಿ ಹಿರೇಮಠ, ರಮೇಶ ಪಾಟೀಲ್, ಮೂರ್ತಿ ಕರ್ಜಗಿ, ಶ್ರೀನಿವಾಸ ಹುಬ್ಬಳ್ಳಿ, ವೆಂಕಟೇಶ ಕಟ್ಟಿಮನಿ, ಪ್ರಶಾಂತ ಜೈನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement