ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 15 Jan 2014, 11:31 am

ಗಂಗಾಜಲ ಚೌಡೇಶ್ವರಿ ಜಾತ್ರೆ
ರಾಣಿಬೆನ್ನೂರು: ಗ್ರಾಮ ದೇವತೆ ಗಂಗಾಜಲದ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಸೋಮವಾರ ಆರಂಭವಾಗಿದ್ದು, ರಾತ್ರಿ 8 ಗಂಟೆಗೆ ತಳವಾರ ಓಣಿಯಿಂದ ಆರಂಭವಾದ ಮೆರವಣಿಗೆ ಬೆಳಗಿನ 7ರ ವರೆಗೂ ಸಾಗಿತು. ಬಾಜಾ ಭಜಂತ್ರಿ, ಡೊಳ್ಳು ಕುಣಿತ, ಕೋಲಾಟ, ಸಾಹಸಿ ತರುಣರು ನಡೆಸಿದ ಲಾಟಿ ವ ಗೋಲ ತಿರುಗಿಸುವ ಕಾರ್ಯ ನೋಡುಗರನ್ನು ಆಕರ್ಷಿಸಿದವು.
ತಳವಾರ ಓಣಿ, ದೊಡ್ಡಪೇಟೆ, ಕುಂಬಾರ ಓಣಿ, ಗವಳಿ ಗಲ್ಲಿ, ಟಾಂಗಾ ಕೂಟ, ಕುರುಬಗೇರಿ, ರಾಷ್ಟ್ರೀಯ ಹೆದ್ದಾರಿ, ಹಲಗೇರಿ ಕ್ರಾಸ್ ಹಾಗೂ ಮೆಡ್ಲೇರಿ ರಸ್ತೆ ಉದ್ದಕ್ಕೂ ಅದ್ಧೂರಿಯಿಂದ ಮೆರವಣಿಗೆ ಮಾಡಲಾಯಿತು. ನಗರಸಭೆ ಪ್ರಭಾರಿ ಅಧ್ಯಕ್ಷ ಶಿವಪ್ಪ ಮಣೇಗಾರ, ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಜಿ. ಶಿವಣ್ಣ, ಎಪಿಎಂಸಿ ಅಧ್ಯಕ್ಷ ನಂದೆಪ್ಪ ತೆಗ್ಗಿನ, ಟಿಎಪಿಎಂಎಸ್ ಅಧ್ಯಕ್ಷ ಹನುಮಂತಗೌಡ ಮುಡದ್ಯಾವಣ್ಣನವರ, ತಾಪಂ ಉಪಾಧ್ಯಕ್ಷ ಗಣೇಶಪ್ಪ ಬಿಲ್ಲಾಳ, ನಗರಸಭಾ ಸದಸ್ಯರಾದ ಪ್ರಭುಸ್ವಾಮಿ ಕರ್ಜಗಿಮಠ, ಶಶಿಧರ ಬಸೆನಾಯ್ಕರ, ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಪೂಜಾರ, ರಾಮಣ್ಣ ಕೋಲಕಾರ, ಭೀಮಣ್ಣ ಯಡಚಿ, ನಾಗರಾಜ ಕಲಾಲ, ರತ್ನಾ ಪುನೀತ, ನಸರುಲ್ಲಾ ಮುಲ್ಲಾ, ಬಶೀರ ಅಹ್ಮದ ಕಜ್ಜಗಿ ಇದ್ದರು.
ಕ್ಯಾನ್ಸರ್ ಪೀಡಿತರಿಗೆ ನೆರವು
ಹಾವೇರಿ: ಹಾವೇರಿ ರೋಟರಿ ಸಂಸ್ಥೆ ಸದಸ್ಯ ರವಿ ಬಿ. ಮೆಣಸಿನಕಾಯಿ ಅವರು ತಮ್ಮ ತಂದೆ, ಮಾಜಿ ಸಂಸದ ಬಿ.ಎಂ. ಮೆಣಸಿನಕಾಯಿ ಅವರ ಪುಣ್ಯತಿಥಿ ಅಂಗವಾಗಿ ಬಡ ಕ್ಯಾನ್ಸರ್ ರೋಗಿಗಳಿಗೆ ಧನಸಹಾಯ ನೀಡಬಯಸಿದ್ದು, ಅರ್ಹರು ಸಂಪರ್ಕಿಸಬಹುದು. ಜಿಲ್ಲೆಯ ಬಡ ಕ್ಯಾನ್ಸರ್ ರೋಗಿಗಳು ಅಗತ್ಯ ದಾಖಲೆಗಳೊಂದಿಗೆ ರವಿ ಮೆಣಸಿನಕಾಯಿ (ಮೊ. 9448029456), ರೋಟರಿ ಅಧ್ಯಕ್ಷ ಶರತ್ ಮಲ್ಲನಗೌಡರ (ಮೊ. 9480324365), ಮಹಾದೇವ ಪಾಟೀಲ (ಮೊ. 9448133639) ಸಂಪರ್ಕಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸಲು ಜ. 22 ಕೊನೆ ದಿನ.
ನಾಳೆಯಿಂದ ಜಾತ್ರೆ
ಬ್ಯಾಡಗಿ: ಬನಶಂಕರಿದೇವಿ ಜಾತ್ರಾ ಮಹೋತ್ಸವ ಜ. 16 ಮತ್ತು 17ರಂದು ನಡೆಯಲಿದೆ. ಜ. 16ರ ಬೆಳಗಿನ ಜಾವ 4.30ಕ್ಕೆ ದೇವಿಗೆ ಅಭಿಷೇಕ, ಪೂಜೆ, ಹೋಮ, ಬಳಿಕ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮವಿದೆ. ಮಧ್ಯಾಹ್ನ 12ಕ್ಕೆ ದೇವಿಯ ರಥೋತ್ಸವ, ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಇದೆ. ಜ. 17ರ ಸಂಜೆ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮಗಳಿವೆ. ಜ. 18ರ  ಸಂಜೆ ಮಿಮಿಕ್ರಿ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.
ನಿತ್ಯಾ ಗಡಿಪಾರಿಗೆ ಆಗ್ರಹ
ಹಾವೇರಿ: ಕನ್ನಡ ನೆಲದಲ್ಲೇ ಅಶ್ರಮ ಮಾಡಿಕೊಂಡು ಕನ್ನಡಿಗರ ವಿರುದ್ಧ ಮಾತನಾಡಿದ ನಿತ್ಯಾನಂದ ಸ್ವಾಮಿರಾಜ್ಯಕ್ಕೆ ಕಾಲಿಡದಂತೆ ಮಾಡಬೇಕು ಎಂದು ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ನಿತ್ಯಾನಂದನ ಪ್ರತಿಕೃತಿ ದಹಿಸಿದರು. ಹರಿದ್ವಾರದಲ್ಲಿ ಕರ್ನಾಟಕದ ಜನರಿಗೆ ಕೊಠಡಿ ನೀಡಬಾರದೆಂದು ಹೇಳಿಕೆ ನೀಡಿದ್ದು ಖಂಡನೀಯ. ಸರ್ಕಾರ ಗಡಿಪಾರು ಮಾಡದಿದ್ದರೆ ಕನ್ನಡಪರ ಸಂಘಟನೆಗಳೇ ಆತನನ್ನು ರಾಜ್ಯದಿಂದ ಹೊರಗಟ್ಟಬೇಕಾಗುತ್ತದೆ ಎಂದು ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಟಿಕೇಹಳ್ಳಿ ಎಚ್ಚರಿಸಿದ್ದಾರೆ. ನಗರಾಧ್ಯಕ್ಷ ಶಿವಬಸವ ಬಣಕಾರ, ನಗರ ಕಾರ್ಯದರ್ಶಿ ನವೀನ ಅಪ್ಪಾಜಿ, ದಾರಕುಸ್ವಾಮಿ ಮಳಿಮಠ, ನಿಖಿಲ ಕೊರಡೂರ, ಸಾಗರ ಅಂಗಡಿ, ನವೀನ ಛಲವಾದಿ, ಗಂಗಾಧರ ಅಕಳಂಡಸ್ವಾಮಿಮಠ ಇದ್ದರು.
ಆದರ್ಶ ಪಾಲಿಸಿ: ಗಿರೀಶ್
ಹಿರೇಕೆರೂರು: ವಿವೇಕಾನಂದರ ಸ್ಮರಣೆ ಮಾಡಿದರೆ ಸಾಲದು. ಅವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಾರ್ಥಕ ಎಂದು ಆರೆಸ್ಸೆಸ್ ಧಾರವಾಡ ವಿಭಾಗದ ವ್ಯವಸ್ಥಾಪಕ ಗಿರೀಶ್ ನಾಡಿಗೇರ ಹೇಳಿದರು. ರಟ್ಟಿಹಳ್ಳಿಯ ಶ್ರೀ ಭಂಟೇಶ್ವರ ದೇವಸ್ಥಾನದಲ್ಲಿ ಹಿಂದೂ ಸೇವಾ ಪ್ರತಿಷ್ಠಾನ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 151ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು. ವಿವೇಕಾನಂದರ ಭಾವಚಿತ್ರದ ಶೋಭಾಯಾತ್ರೆ ಭಂಟೇಶ್ವರ ದೇವಸ್ಥಾನದಿಂದ ಸಾಗಿತು. ರೂಪಾ ಅಂಬ್ಲೇರ, ಶಶಿಕಲಾ ಎ.ಜಿ., ದೀಪಾ ಹುರಕಡ್ಲಿ, ಈರಮ್ಮ ಬಾಳಿಕಾಯಿ, ಮೈನಾ ಮಾದಾಪುರ, ಮಂಗಳಮ್ಮ ಭಗಿನಿ, ಅಶೋಕ ಚಿಕ್ಕಮೊರಬ, ಬಸವರಾಜ ಚಲವಾದಿ, ರುದ್ರೇಶ ಪ್ರಸಾದಿಮಠ, ನವೀನ ಬಾಳಿಕಾಯಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement