ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 15 Jan 2014, 11:41 am

ಸೇವಾ ಕೇಂದ್ರ ಉದ್ಘಾಟನೆಬ್ಯಾಡಗಿ: ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ಖಾತ್ರಿ ಯೋಜನೆಯಲ್ಲಿ ನಿರ್ಮಿಸಿರುವ ಭಾರತ ನಿರ್ಮಾಣ ರಾಜೀವಗಾಂಧಿ ಸೇವಾ ಕೇಂದ್ರದ ಕಟ್ಟಡವನ್ನು ಜ. 16ರಂದು ಬೆಳಗ್ಗೆ 11 ಗಂಟೆಗೆ ಶಾಸಕ ಬಸವರಾಜ ಶಿವಣ್ಣನವರ ಉದ್ಘಾಟಿಸುವರು. ಗ್ರಾಪಂ ಅಧ್ಯಕ್ಷೆ ನೇತ್ರಾ ಜಾಡರ ಅಧ್ಯಕ್ಷತೆ ವಹಿಸುವರು. ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಸೋಮಣ್ಣ ಬೇವಿನಮರದ, ನಾಗರಾಜ ಛಬ್ಬಿ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಉಪಾಧ್ಯಕ್ಷೆ ಡಾ೤ ಶೋಭಾ ನಿಸ್ಸೀಮಗೌಡ್ರ, ಸದಸ್ಯರಾದ ಗದಿಗೆವ್ವ ಬಸನಗೌಡ್ರ, ತಾಪಂ ಅಧ್ಯಕ್ಷೆ ಚಿನ್ನವ್ವ ಫಾಸಿ, ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ಸದಸ್ಯೆ ಚಮನಬೀ ಮುಲ್ಲಾ, ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ ನವಲೆ ಉಪಸ್ಥಿತರಿರುವರೆಂದು ಪ್ರಕಟಣೆ ತಿಳಿಸಿದೆ.17ಕ್ಕೆ ಯುವಜನ ಮೇಳಬ್ಯಾಡಗಿ: ತಾಲೂಕಿನ ಆಣೂರ ಗ್ರಾಮದಲ್ಲಿ ಜ. 17ರಂದು ತಾಲೂಕು ಮಟ್ಟದ ಯುವಜನ ಮೇಳ ನಡೆಯಲಿದೆ. ತಾಪಂ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಾವಗೀತೆ, ಗೀಗೀಪದ, ಲಾವಣಿ ಪದಗಳು, ಕೋಲಾಟ, ಡೊಳ್ಳು ಕುಣಿತ, ರಂಗಗೀತೆ, ಜಾನಪದ ನೃತ್ಯ, ಭಜನೆ, ಜಾನಪದ ಗೀತೆಗಳು, ಏಕಪಾತ್ರಾಭಿನಯ ಸ್ಪರ್ಧೆಗಳಿವೆ. ಯುವಕರಿಗೆ ಪ್ರತ್ಯೇಕವಾಗಿ ಚರ್ಮವಾದ್ಯ ಮೇಳ, ಸಣ್ಣಾಟ, ದೊಡ್ಡಾಟ, ವೀರಗಾಸೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆಸಕ್ತರು ತಾಪಂ ಕಚೇರಿಯಲ್ಲಿ ಹೆಸರು ನೋಂದಾಯಿಸಬೇಕು. ಮಾಹಿತಿಗೆ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಆರ್.ಎಂ. ಪಾಟೀಲ ಅವರನ್ನು ಸಂಪರ್ಕಿಸುವಂತೆ ತಾಪಂ ಇಒ ಎಸ್.ಆರ್. ಪಾಟೀಲ ತಿಳಿಸಿದ್ದಾರೆ.ನಾಳೆ ದತ್ತಿ ಉಪನ್ಯಾಸರಾಣಿಬೆನ್ನೂರು: ಕನ್ನಡ ಸಾಹಿತ್ಯ ಪರುಷತ್ತು ಹಾಗೂ ಹೊನ್ನಾಳಿಯ ಚನ್ನಮಲ್ಲಿಕಾರ್ಜುನ ಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ತಿನ ಆಶ್ರಯದಲ್ಲಿ ವರ್ತಕರಾದ ವಾಸುದೇವ ಪಿ. ಗುಪ್ತಾ ಮತ್ತು ಪ್ರಕಾಶ ಪಿ. ಗುಪ್ತಾ ಅವರು ಕಿರಣದೇವಿ ಹಾಗೂ ಪ್ಯಾರೇಲಾಲಜಿ ಗುಪ್ತಾ ಸ್ಮರಣಾರ್ಥ ಸ್ಥಾಪಿಸಿರುವ ದತ್ತಿನಿಧಿ ಉಪನ್ಯಾಸ ಜ. 16ರಂದು ಸಂಜೆ 6.30ಕ್ಕೆ ಮುತ್ಯುಂಜಯ ನಗರದ ಚನ್ನೇಶ್ವರ ಮಠದ ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ನಡೆಯಲಿದೆ. ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಅಧ್ಯಕ್ಷತೆ ವಹಿಸುವರು. ನಿವೃತ್ತ ಶಿಕ್ಷಕ ವಿ.ವಿ. ಹರಪನಹಳ್ಳಿ 'ಲೋಕಮಾತೆ ವಜ್ರೇಶ್ವರಿ ದೇವಿ ಮಹಾತ್ಮೆ' ಕುರಿತು ಉಪನ್ಯಾಸ ನೀಡುವರು. ಕಸಾಪ ಮಾಜಿ ಅಧ್ಯಕ್ಷ ಅ.ಸಿ. ಹಿರೇಮಠ, ಕಸಾಪ ತಾಲೂಕು ಅಧ್ಯಕ್ಷ ಶಿವಾನಂದ ಸಂಗಾಪುರ, ಗೌರವಾಧ್ಯಕ್ಷ ಪ್ರಭುಲಿಂಗಪ್ಪ ಸಿ. ಹಲಗೇರಿ, ವಿರೂಪಾಕ್ಷಪ್ಪ ಪಡಿಗೋದಿ, ಕೋಶಾಧ್ಯಕ್ಷ ಎಂ.ಎಂ. ಪಾಟೀಲ, ಜಯಣ್ಣ ಬಿ. ಕರಡೇರ ಆಗಮಿಸುವರೆಂದು ಕಸಾಪ ಗೌರವ ಕಾರ್ಯದರ್ಶಿ ಬಿ.ಎಸ್. ಅಜ್ಮನಿ ತಿಳಿಸಿದ್ದಾರೆ.ಧಾರ್ಮಿಕ ಜಾಗೃತಿ ಮೆರವಣಿಗೆಹಾನಗಲ್ಲ: ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ಮೆರವಣಿಗೆ ಮೂಲಕ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿ, ಶುಭಾಶಯ ಕೋರಿದರು. ಧಾರ್ಮಿಕ ಜಾಗೃತಿಗಾಗಿ ಮೆರವಣಿಗೆ ನಡೆಸಿದರು. ಮನೆ ಹಾಗೂ ಪ್ರಾರ್ಥನಾ ಮಂದಿರಗಳನ್ನು ದೀಪಾಲಂಕಾರ ಮಾಡಿ, ಪೈಗಂಬರರ ಜೀವನ ಚರಿತ್ರೆ ಪಠಿಸಿದರು.ಭಾವೈಕ್ಯದ ಈದ್ಸವಣೂರು: ತಾಲೂಕಿನ ಕಾರಡಗಿ ಗ್ರಾಮದಲ್ಲಿ ಈದ್-ಮಿಲಾದ್ ಹಬ್ಬವನ್ನು ಹಿಂದೂ ಮುಸ್ಲಿಂ ಬಾಂಧವರು ಒಟ್ಟಾಗಿ ಆಚರಿಸಿ, ಸೌಹಾರ್ದ ಮೆರೆದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಪರಸ್ಪರ ಶುಭಾಶಯ ಕೋರಿ, ಹಜರತ್ ಮಹಮದ್ ಪೈಗಂಬರ್ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿದರು.ಈದ್ ಮೆರವಣಿಗೆಹಿರೇಕೆರೂರು: ಪಟ್ಟಣದಲ್ಲಿ ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಬಾಂಧವರು ಮೆರವಣಿಗೆ ನಡೆಸಿದರು. ಮಾಜಿ ಶಾಸಕ ಬಿ.ಸಿ. ಪಾಟೀಲ ಶುಭ ಕೋರಿದರು. ಸಮಾಜದ ಮುಖಂಡ ಅಬ್ದುಲ್ ಖಾದರ ಲೋಹಾರ ಇದ್ದರು.ದರ್ಗಾ ಸ್ತಬ್ಧಚಿತ್ರಹಾನಗಲ್ಲ: ಮೊಹಮ್ಮದ್ ಪೈಗಂಬರರ ಜನ್ಮದಿನವಾದ ಈದ್ ಮಿಲಾದ್ ಹಬ್ಬದ ಅಂಗವಾಗಿ ನಗರದ ಇಂದಿರಾನಗರ ಬಡಾವಣೆಯ ನೌಜವಾನ-ಎ-ಖಿಸ್ಕ-ಎ ರಾಜಾ ಕಮಿಟಿ ಸದಸ್ಯರು, ಹಾನಗಲ್ಲ ನಗರದ ಪೀರ ಸೈಯದ್ ಮಖಬುಲ್ ಅಹ್ಮದಶಾ ದರ್ಗಾ ಸ್ತಬ್ಧಚಿತ್ರ ನಿರ್ಮಿಸಿ ಭಕ್ತಿ ಮೆರೆದರು.ಹೊಸರಿತ್ತಿ ಗುದ್ದಲೀಶ್ವರ ಶ್ರೀಗಳ ಜಾತ್ರೆ ಇಂದಿನಿಂದಹಾವೇರಿ: ಹೊಸರಿತ್ತಿ ಗುದ್ದಲೀಶ್ವರ ಶ್ರೀಗಳ 114ನೇ ಜಾತ್ರಾ ಮಹೋತ್ಸವ ಜ. 15ರಿಂದ 19ರ ವರೆಗೆ ನಡೆಯಲಿದೆ. ಬುಧವಾರ ಬೆಳಗ್ಗೆ 8 ಗಂಟೆಗೆ ಷಟ್‌ಸ್ಥಲ ಧ್ವಜಾರೋಹಣ. ಮುಂಡರಗಿ ಅನ್ನದಾನೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು, ಹೂವಿನಶಿಗ್ಲಿ ಚನ್ನವೀರ ಶ್ರೀಗಳು ಧ್ವಜಾರೋಹಣ ನೇರವೇರಿಸಲಿದ್ದಾರೆ. ಬೆಳಗ್ಗೆ 9ಕ್ಕೆ ಗಂಗಾ ಪೂಜೆ, ಚೌಡೇಶ್ವರಿ ದೇವಿ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, 10 ಗಂಟೆಗೆ ಸಾಮೂಹಿಕ ವಿವಾಹ, ಮಧ್ಯಾಹ್ನ 12 ಗಂಟೆಗೆ ಮಹಾಗಣರಾಧನೆ, ಸಂಜೆ 4 ಗಂಟೆಗೆ ಪುಷ್ಪ ರಥೋತ್ಸವ ನಡೆಯಲಿದೆ. ಶಿವಯೋಗೀಶ್ವರ ಶ್ರೀಗಳು, ರಾಜಶೇಖರ ಶ್ರೀಗಳು, ಮರುಳಸಿದ್ಧ ಶ್ರೀಗಳು, ಗುರುಲಿಂಗ ದೇವರು, ಮಹಾಂತ ದೇವರು, ನಿರಂಜನ ಶ್ರೀಗಳು, ಚನ್ನಮಲ್ಲಿಕಾರ್ಜುನ ಶ್ರೀಗಳು ಪಾಲ್ಗೊಳ್ಳುವರು. ಜ. 16ರಂದು ಬೆಳಗ್ಗೆ ಹರಕೆಯ ಉರುಳು ಸೇವೆ, ಮಧ್ಯಾಹ್ನ 12 ಗಂಟೆಗೆ ಮಹಾಗಣಾರಾಧನೆ, ಸಂಜೆ 4 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ರಾತ್ರಿ 8.30ಕ್ಕೆ ಧಾರ್ಮಿಕ ಕಾರ್ಯಕ್ರಮ. ಅಧ್ಯಕ್ಷತೆಯನ್ನು ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಶ್ರೀಗಳು ವಹಿಸಲಿದ್ದಾರೆ. ಗುತ್ತಲದ ಸಂಗನಬಸವ ಶ್ರೀಗಳು, ನಿಜಗುಣ ಶ್ರೀಗಳು, ಬಸವ ಶ್ರೀಗಳು, ಶಿವಕುಮಾರ ಶ್ರೀಗಳು, ಸಚ್ಚಿದಾನಂದ ಶ್ರೀಗಳು ಆಗಮಿಸುವರು. ಜ. 17ರಂದು ಸಂಜೆ 4 ಗಂಟೆಗೆ ಕಡುಬಿನ ಕಾಳಗ, ರಾತ್ರಿ 7 ಗಂಟೆಗೆ ಸಿಂಹಾಸನಾರೋಹಣ. ರಾತ್ರಿ 8ಕ್ಕೆ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಾಂತರುದ್ರ ಶ್ರೀಗಳು, ಸಂಗನಬಸವ ಶ್ರೀಗಳು, ವಿಶ್ವೇಶ್ವರ ಶ್ರೀಗಳು, ಗುರುಶಾಂತ ಶಿವಾಚಾರ್ಯರು, ಕೃಷ್ಣಾನಂದ ಶ್ರೀಗಳು ಗ್ರಂಥ ಬಿಡುಗಡೆ ಮಾಡಲಿದ್ದಾರೆ. ನಿವೃತ್ತ ಪ್ರಾಚಾರ್ಯ ನರಸಿಂಹ ವಿಶೇಷ ಉಪನ್ಯಾನ ನಿಡಲಿದ್ದಾರೆ. ಜ. 18ರಂದು ಬೆಳಗ್ಗೆ 10 ಗಂಟೆಗೆ ಭಾರ ಎತ್ತುವ ಸ್ಪರ್ಧೆ. ಸಂಜೆ 5 ಗಂಟೆಗೆ ಚಂದನ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ. ಜ. 19ರಂದು ಬೆಳಗ್ಗೆ 9ಕ್ಕೆ ರಾಜ್ಯ ಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಜಾತ್ರಾ ಮಹೋತ್ಸವದ ಸಂಚಾಲಕ ಅರುಣಕುಮಾರ ಶೆಟ್ಟರ, ಸಿದ್ದರಾಜ ಕಲಕೋಟಿ ತಿಳಿಸಿದ್ದಾರೆ.ಕಳಸೂರ ದೇವಿ ಜಾತ್ರೆ ಆರಂಭಸವಣೂರು: ತಾಲೂಕಿನ ಕಳಸೂರ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ (ಮಾಯಮ್ಮ ದೇವಿ) ದೇವಸ್ಥಾನದ ಜಾತ್ರಾ ಮಹೋತ್ಸವ ಮಂಗಳವಾರ ಆರಂಭಗೊಂಡಿದ್ದು, ಮೂರು ದಿನಗಳ ಪರ್ಯಂತ ಜರುಗಲಿದೆ. ಶತಮಾನೋತ್ಸವ ಆಚರಿಸುತ್ತಿರುವ ಜಾತ್ರೆಯಲ್ಲಿ ಮಂಗಳವಾರ ಬೆಳಗ್ಗೆ ಅಭಿಷೇಕ, ಎಲೆ ಪೂಜೆ, ಡೊಳ್ಳು, ಭಜನೆಗಳೊಂದಿಗೆ ಪಲ್ಲಕ್ಕಿ ಸೇವೆ, ಉಡಿ ತುಂಬುವ ಕಾರ್ಯಕ್ರಮಗಳು ನೆರವೇರಿದವು. ಜ. 15ರಂದು ಬಂಡಿ ಉತ್ಸವ, ಎತ್ತಿನ ಮಜಲು ನೆರವೇರಲಿದ್ದು, ಸಂಜೆ 4 ಗಂಟೆಗೆ ದೇವಸ್ಥಾನದ ಆವರಣದಿಂದ ದೇವಿಯ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜ. 16ರಂದು ಬೆಳಗ್ಗೆ ಓಕುಳಿ ಗುಂಡಿಗೆ ನೀರು ತುಂಬುವುದು, ಸಂಜೆ ಪಲಕ್ಕಿ ಸೇವೆಯೊಂದಿಗೆ ಓಕುಳಿ, ಆನೆ ಬಂಡಿ ಉತ್ಸವ ಆಚರಿಸಲಾಗುತ್ತದೆ. ಬಳಿಕ ಓಕುಳಿ ನಡೆಯಲಿದೆ. ಜಾತ್ರೆ ಅಂಗವಾಗಿ ಜ. 15ರಂದು ಬೆಳಗ್ಗೆ 9 ಗಂಟೆಗೆ ಯುವಕರ ಸುರಕ್ಷತಾ ಜಾಗೃತಿಗಾಗಿ ಗ್ರಾಮದ ಶಾಲೆ ಆವರಣದಲ್ಲಿ ಸ್ಲೋ ಬೈಕ್ ಸ್ಪರ್ಧೆ ಆಯೋಜಿಸಲಾಗಿದೆ.ಮಕ್ಕಳ ಹಬ್ಬದ ಅಂಗವಾಗಿ ವೇಷ ಭೂಷಣ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ಸಂಜೆ ಸಾಧಕರ ಸನ್ಮಾನವಿದೆ.ಅರಳೆಲೆ ಹಿರೇಮಠ: 27ರಂದು ರುದ್ರಮುನಿ ಶ್ರೀ ಸ್ಮರಣೋತ್ಸವಶಿಗ್ಗಾಂವಿ: ತಾಲೂಕಿನ ಬಂಕಾಪುರದ ಅರಳೆಲೆ ಹಿರೇಮಠದ 99ನೇ ಪಟ್ಟಾಧ್ಯಕ್ಷರಾಗಿದ್ದ ಶ್ರೀ ರುದ್ರಮುನಿ ಶಿವಾಚಾರ್ಯರ ಸಾಮರಸ್ಯದ 40ನೇ ಸ್ಮರಣೋತ್ಸವ ಜ. 27ರಂದು ಬೆಳಗ್ಗೆ 9.30ರಿಂದ ನಡೆಯಲಿದೆ. ಬಾಳೆಹೊನ್ನೂರಿನ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಭೀಮಾಶಂಕರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಜತೆಗೆ, ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳ ಭಾವಚಿತ್ರದ ಮೆರವಣಿಗೆಯೂ ಸಾಗಲಿದೆ. ರಂಭಾಪುರಿ ಶ್ರೀಗಳು ಹಾಗೂ ಭೀಮಾಶಂಕರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ, ಅರಳೆಲೆ ಹಿರೇಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರ ಸಮ್ಮುಖದಲ್ಲಿ ಧರ್ಮ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.ಆದ್ಯತೆ ಮೇರೆಗೆ ಕಾಮಗಾರಿ: ತಹಶೀಲ್ದಾರಹಾನಗಲ್ಲ: ವಿವಿಧ ಯೋಜನೆಗಳ ಅನುದಾನ ಬಳಸಿಕೊಂಡು ತಾಲೂಕಿನ ಗ್ರಾಮೀಣ ಭಾಗದ ಜನವಸತಿ ಪ್ರದೇಶಗಳಲ್ಲಿ ಮೂಲಸೌಲಭ್ಯ ಕಾಮಗಾರಿಗಳನ್ನು ಆದ್ಯತೆ ಅನುಸಾರ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಮನೋಹರ ತಹಶೀಲ್ದಾರ್ ಹೇಳಿದ್ದಾರೆ.ತಾಲೂಕಿನ ಗಿರಿಸಿನಕೊಪ್ಪ ಗ್ರಾಮದ ಪರಿಶಿಷ್ಟ ಜಾತಿ-ಪಂಗಡದ ಜನಾಂಗದವರ ಕಾಲನಿಯಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಾಣಗೊಳ್ಳುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅವರು, ಗ್ರಾಮೀಣಾಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚು ಅನುದಾನ ನೀಡುತ್ತಿದೆ. ಕುಡಿಯುವ ನೀರು, ರಸ್ತೆ, ಶಿಕ್ಷಣಕ್ಕೆ ಹಣದ ಕೊರತೆಯಾಗದು. ಸರ್ಕಾರದ ಅನುದಾನಗಳು ಸದುಪಯೋಗವಾಗಬೇಕು, ಕಾಮಗಾರಿ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಕಾಳಜಿ ವಹಿಸಬೇಕು ಎಂದರು.ಗೆಜ್ಜಿಹಳ್ಳಿ ಗ್ರಾಪಂ ಅಧ್ಯಕ್ಷ ರಾಜು ಮಲ್ಲಿಗಾರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಕಸ್ತೂರೆವ್ವ ವಡ್ಡರ, ತಾಪಂ ಸದಸ್ಯೆ ರೆಹಮುನ್ನಿಸಾ ಮುಂಡರಗಿ, ಮುಖಂಡರಾದ ಶಿವಾಜಿ ಆರೇರ, ಶಂಭಣ್ಣ ವಡ್ಡರ, ಕೋಟೆಪ್ಪ ವಾಸನದ, ಅಬ್ದುಲ್ ಸತ್ತಾರ ಮುಂಡರಗಿ, ರಾಜಪ್ಪ ಪುರದವರ, ರಾಮಚಂದ್ರಪ್ಪ ದಾಸರ, ನೀಲಪ್ಪ ಕುರುಬರ, ಚಂದ್ರಶೇಖರ ತಹಶೀಲ್ದಾರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement