ಹೊಸರಿತ್ತಿ ಗುದ್ದಲೀಶ್ವರ ಶ್ರೀಗಳ ಜಾತ್ರೆ ಇಂದಿನಿಂದ
ಹಾವೇರಿ: ಹೊಸರಿತ್ತಿ ಗುದ್ದಲೀಶ್ವರ ಶ್ರೀಗಳ 114ನೇ ಜಾತ್ರಾ ಮಹೋತ್ಸವ ಜ. 15ರಿಂದ 19ರ ವರೆಗೆ ನಡೆಯಲಿದೆ. ಬುಧವಾರ ಬೆಳಗ್ಗೆ 8 ಗಂಟೆಗೆ ಷಟ್ಸ್ಥಲ ಧ್ವಜಾರೋಹಣ. ಮುಂಡರಗಿ ಅನ್ನದಾನೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು, ಹೂವಿನಶಿಗ್ಲಿ ಚನ್ನವೀರ ಶ್ರೀಗಳು ಧ್ವಜಾರೋಹಣ ನೇರವೇರಿಸಲಿದ್ದಾರೆ. ಬೆಳಗ್ಗೆ 9ಕ್ಕೆ ಗಂಗಾ ಪೂಜೆ, ಚೌಡೇಶ್ವರಿ ದೇವಿ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, 10 ಗಂಟೆಗೆ ಸಾಮೂಹಿಕ ವಿವಾಹ, ಮಧ್ಯಾಹ್ನ 12 ಗಂಟೆಗೆ ಮಹಾಗಣರಾಧನೆ, ಸಂಜೆ 4 ಗಂಟೆಗೆ ಪುಷ್ಪ ರಥೋತ್ಸವ ನಡೆಯಲಿದೆ. ಶಿವಯೋಗೀಶ್ವರ ಶ್ರೀಗಳು, ರಾಜಶೇಖರ ಶ್ರೀಗಳು, ಮರುಳಸಿದ್ಧ ಶ್ರೀಗಳು, ಗುರುಲಿಂಗ ದೇವರು, ಮಹಾಂತ ದೇವರು, ನಿರಂಜನ ಶ್ರೀಗಳು, ಚನ್ನಮಲ್ಲಿಕಾರ್ಜುನ ಶ್ರೀಗಳು ಪಾಲ್ಗೊಳ್ಳುವರು. ಜ. 16ರಂದು ಬೆಳಗ್ಗೆ ಹರಕೆಯ ಉರುಳು ಸೇವೆ, ಮಧ್ಯಾಹ್ನ 12 ಗಂಟೆಗೆ ಮಹಾಗಣಾರಾಧನೆ, ಸಂಜೆ 4 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ರಾತ್ರಿ 8.30ಕ್ಕೆ ಧಾರ್ಮಿಕ ಕಾರ್ಯಕ್ರಮ. ಅಧ್ಯಕ್ಷತೆಯನ್ನು ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಶ್ರೀಗಳು ವಹಿಸಲಿದ್ದಾರೆ. ಗುತ್ತಲದ ಸಂಗನಬಸವ ಶ್ರೀಗಳು, ನಿಜಗುಣ ಶ್ರೀಗಳು, ಬಸವ ಶ್ರೀಗಳು, ಶಿವಕುಮಾರ ಶ್ರೀಗಳು, ಸಚ್ಚಿದಾನಂದ ಶ್ರೀಗಳು ಆಗಮಿಸುವರು. ಜ. 17ರಂದು ಸಂಜೆ 4 ಗಂಟೆಗೆ ಕಡುಬಿನ ಕಾಳಗ, ರಾತ್ರಿ 7 ಗಂಟೆಗೆ ಸಿಂಹಾಸನಾರೋಹಣ. ರಾತ್ರಿ 8ಕ್ಕೆ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಾಂತರುದ್ರ ಶ್ರೀಗಳು, ಸಂಗನಬಸವ ಶ್ರೀಗಳು, ವಿಶ್ವೇಶ್ವರ ಶ್ರೀಗಳು, ಗುರುಶಾಂತ ಶಿವಾಚಾರ್ಯರು, ಕೃಷ್ಣಾನಂದ ಶ್ರೀಗಳು ಗ್ರಂಥ ಬಿಡುಗಡೆ ಮಾಡಲಿದ್ದಾರೆ. ನಿವೃತ್ತ ಪ್ರಾಚಾರ್ಯ ನರಸಿಂಹ ವಿಶೇಷ ಉಪನ್ಯಾನ ನಿಡಲಿದ್ದಾರೆ. ಜ. 18ರಂದು ಬೆಳಗ್ಗೆ 10 ಗಂಟೆಗೆ ಭಾರ ಎತ್ತುವ ಸ್ಪರ್ಧೆ. ಸಂಜೆ 5 ಗಂಟೆಗೆ ಚಂದನ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ. ಜ. 19ರಂದು ಬೆಳಗ್ಗೆ 9ಕ್ಕೆ ರಾಜ್ಯ ಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಜಾತ್ರಾ ಮಹೋತ್ಸವದ ಸಂಚಾಲಕ ಅರುಣಕುಮಾರ ಶೆಟ್ಟರ, ಸಿದ್ದರಾಜ ಕಲಕೋಟಿ ತಿಳಿಸಿದ್ದಾರೆ.