ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಾನಗಲ್ಲ ರಾಮಲಿಂಗೇಶ್ವರ ದೇವರ ಸಂಭ್ರಮದ ತೇರು

Lingaraj Badiger
Updated On : 16 Jan 2014, 10:50 am

ಹಾನಗಲ್ಲ: ಮಕರ ಸಂಕ್ರಮಣದ ಸಂಭ್ರಮದ ಮಧ್ಯೆ ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಬುಧವಾರ ಬೆಳಗ್ಗೆ 9 ಗಂಟೆಗೆ ಸಾಲಗೇರಿಯಿಂದ ಪ್ರಾರಂಭವಾದ 63ನೇ ವರ್ಷದ ರಥೋತ್ಸವ ಸಂಜೆ 4 ಗಂಟೆಗೆ ಧರ್ಮಾ ನದಿ ತಟದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನ ತಲುಪಿತು. ಮಕ್ಕಳು, ಯುವಕರು, ಭಕ್ತರು ತೇರನ್ನು ಎಳೆದು ನಮಿಸಿದರು. ಮೆರವಣಿಗೆಯಲ್ಲಿ ವಿವಿಧ ವಾದ್ಯಗಳು, ಬೃಹತ್ ಗೊಂಬೆಗಳು ಸಾರ್ವಜನಿಕರ ಗಮನ ಸೆಳೆದವು.
ಜ. 14ರಿಂದ 24ರ ವರೆಗೆ ನಡೆಯುವ ಜಾತ್ರೆಯಲ್ಲಿ ಜ. 17 ಹಾಗೂ 24ರಂದು ಶುಕ್ರವಾರ ವಾರದ ಸಂತೆಗಳು ಜಾತ್ರೆ ನಿಮಿತ್ತ ದೇವಸ್ಥಾನದ ಆವರಣದಲ್ಲಿ ನಡೆಯಲಿವೆ. ಜ. 21ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ ಏರ್ಪಡಿಸಲಾಗಿದೆ. ಜ. 22 ಹಾಗೂ 23ರಂದು ಜಂಗಿ ನಿಕಾಲಿ ಕುಸ್ತಿಗಳು ಜರುಗುತ್ತವೆ ಎಂದು ರಾಮಲಿಂಗೇಶ್ವರ ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement