ಜೋಗಿಹಳ್ಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ
ಹಿರೇಕೆರೂರು: ಜೋಗಿಹಳ್ಳಿ ಗ್ರಾಮದಲ್ಲಿ ಜನರು ಕುಡಿಯುವ ನೀರಿನಲ್ಲಿ ಅತಿ ಹೆಚ್ಚು ಫ್ಲೋರೈಡ್ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ತಾವರಗಿ, ರಟ್ಟಿಹಳ್ಳಿ ಗ್ರಾಪಂ ಸಹಯೋಗದಲ್ಲಿ ಆರಂಭಿಸಿದ ಕದಂಬ ಶುದ್ಧ ನೀರಿನ ಘಟಕದಿಂದ ಜೋಗಿಹಳ್ಳಿಗೆ ನೀರು ಪೂರೈಸಲಾಯಿತು. ರಟ್ಟಿಹಳ್ಳಿ ಗ್ರಾಪಂ ಅಧ್ಯಕ್ಷ ಶಂಕರಗೌಡ ಚೆನ್ನಗೌಡ್ರ, ಸದಸ್ಯ ವೀರನಗೌಡ ಪಾಟೀಲ, ಜಾಫರ್ ಖಾಜಿ, ತಾವರಗಿ ಪಿಡಿಒ ಪಿ.ಡಿ. ಓಲೇಕಾರ, ಕದಂಬ ಸೇವಾ ಟ್ರಸ್ಟ್ ಕಾರ್ಯದರ್ಶಿ ಪ್ರದೀಪ ಕುಲಕರ್ಣಿ, ಡಾ ಇ.ಎಲ್. ನಾಡಿಗೇರ, ಗೋವಿಂದರಾಜ ಶೆಟ್ಟಿ, ಪ್ರಕಾಶ ಕುಲಕರ್ಣಿ, ಗ್ರಾಪಂ ಸಿಬ್ಬಂದಿ ರಾಜಕುಮಾರ ಹೇಂದ್ರೆ, ಚಂದ್ರಪ್ಪ ಇದ್ದರು.