ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಾಜಿ ಸೈನಿಕರ ಸಭೆ ನಾಳೆ

Rashmi Kasaragodu
Updated On : 18 Jan 2014, 1:31 am

ಹಾವೇರಿ:  ಜಿಲ್ಲೆಯ ಮಾಜಿ ಸೈನಿಕರ ಸಭೆಯನ್ನು ಜ. 19ರಂದು ಬೆಳಗ್ಗೆ 10ಕ್ಕೆ ಹಾನಗಲ್ ರಸ್ತೆಯಲ್ಲಿರುವ ಆದರ್ಶ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕರೆಯಲಾಗಿದೆ. ಕಚೇರಿ ನಿವೇಶನದ ಜಾಗದಲ್ಲಿ ಕಟ್ಟಡ ನಿರ್ಮಾಣ, ಕಚೇರಿ ನಿವೇಶನದ ನೀಲನಕ್ಷೆ ಹಾಗೂ ಮಾಜಿ ಸೈನಿಕರ ಕುಂದುಕೊರತೆಗಳನ್ನು ಚರ್ಚಿಸಲಾಗುವುದು. ಜಿಲ್ಲೆಯ ಮಾಜಿ ಸೈನಿಕರು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಬೇಕು ಎಂದು ಐ.ಎಸ್. ಪಾಟೀಲ, ವಿ.ಎಸ್. ಚಂದ್ರಶೇಖರ ತಿಳಿಸಿದ್ದಾರೆ.
ವೀರಶೈವ ಮಹಾಸಭಾ: ಗಿರಿಜಾ ಉಪಾಧ್ಯಕ್ಷೆ
ರಾಣಿಬೆನ್ನೂರು: ಇಲ್ಲಿನ ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರ ಹೈಸ್ಕೂಲ್ನ ನಿವೃತ್ತ ದೈಹಿಕ ಶಿಕ್ಷಕಿ ಗಿರಿಜಾ ದುರ್ಗದಮಠ ಅವರನ್ನು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಮಹಿಳಾ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ವೀರಶೈವ ಸಮಾಜದ ಸಂಘಟನೆಗಾಗಿ ಕಾರ್ಯ ನಿರ್ವಹಿಸಬೇಕೆಂದು ಗಿರಿಜಾ ದುರ್ಗದಮಠ ಅವರ ನೇಮಕ ಆದೇಶದಲ್ಲಿ  ತಿಳಿಸಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement