ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಬ್ಬರು ನಾಪತ್ತೆ: ದೂರು

Rashmi Kasaragodu
Updated On : 19 Jan 2014, 12:14 pm

ಹಾವೇರಿ: ಬಾಲಕಿ ಹಾಗೂ ವ್ಯಕ್ತಿಯೊಬ್ಬರು ನಾಪತ್ತೆಯಾದ ಪ್ರತ್ಯೇಕ ಪ್ರಕರಣಗಳು ನಗರದಲ್ಲಿ ನಡೆದಿವೆ. ಶಾಲೆಯಲ್ಲಿ ವಿಶೇಷ ಕ್ಲಾಸ್ ಇದೆ ಎಂದು ಡಿ. 8ರಂದು ಹೋದ  ನಾಗೇಂದ್ರನಮಟ್ಟಿ 7ನೇ ಕ್ರಾಸ್ನ ಎ ಬ್ಲಾಕ್ನ ನೇತ್ರಾ ಮಹಾದೇವಪ್ಪ ಹುಬ್ಬಳ್ಳಿ (16) ಎಂಬ ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ಈಕೆಯ ತಂದೆ ಮಹಾದೇವಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕಿ 5 ಅಡಿ ಎತ್ತರವಿದ್ದು, ದುಂಡುಮುಖ, ಗೋದಿಕೆಂಪು ಮೈಬಣ್ಣ ಹೊಂದಿದ್ದಾಳೆ.  ಮತ್ತೊಂದು ಪ್ರಕರಣದಲ್ಲಿ ವಿನಾಯಕ ವಿರೂಪಾಕ್ಷಪ್ಪ ಶಿರೂರು ಎಂಬಾತ ಕಳೆದ ಡಿ. 28ರಂದು ಮನೆಯಿಂದ ಬಸ್ ನಿಲ್ದಾಣಕ್ಕೆ ಹೋದವನು ನಾಪತ್ತೆಯಾಗಿದ್ದಾನೆ ಎಂದು ಆತನ ಪತ್ನಿ, ಶಿವಾಜಿನಗರದ ಗಾಯತ್ರಿ ಶಿರೂರ ಶಹರ ಠಾಣೆಯಲ್ಲಿ ದೂರು ನೀಡಿದ್ದಾಳೆ. ನಾಪತ್ತೆಯಾದ ವಿನಾಯಕ 5.6 ಅಡಿ ಎತ್ತರವಿದ್ದು, ದುಂಡುಮುಖ ಹೊಂದಿದ್ದಾರೆ.  ಈ ಇಬ್ಬರ ಬಗ್ಗೆ ಮಾಹಿತಿ ಇದ್ದಲ್ಲಿ ಹಾವೇರಿ ಶಹರ ಠಾಣೆ 08375-232333, 9480804545, ಕಂಟ್ರೋಲ್ ರೂಂ 08375-237368 ಅಥವಾ ಪೊಲೀಸ್ ಅಧೀಕ್ಷಕರ ಕಾರ್ಯಾಲಯ 08375-232800ಗೆ ಸಂಪರ್ಕಿಸುವಂತೆ ಪಿಎಸ್ಐ ಆರ್.ಆರ್. ಪಾಟೀಲ ತಿಳಿಸಿದ್ದಾರೆ.



ಹಾವೇರಿ: ನಾಳೆ ವಿವಿಧ ಕಾಮಗಾರಿ ಉದ್ಘಾಟನೆ



ಹಾವೇರಿ: ಸವಣೂರ ತಾಲೂಕು ಯಲವಿಗಿ ಗ್ರಾಪಂ ನೂತನ ಕಟ್ಟಡ, ಶುದ್ಧ ನೀರಿನ ಘಟಕ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಜ. 20ರಂದು ಮಧ್ಯಾಹ್ನ 12.30ಕ್ಕೆ ಯಲವಿಗಿ ಗ್ರಾಮದ ನಂದಿ ಬಸವೇಶ್ವರ ಸಭಾಭವನದಲ್ಲಿ ಜರುಗಲಿದೆ. ಬಾಲೆಹೊಸೂರ ಕುಮಾರ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸೋಮಶೇಖರಯ್ಯ ಹಿರೇಮಠ ಸಾನ್ನಿಧ್ಯ ವಹಿಸಲಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ಉದ್ಘಾಟಿಸುವರು. ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಬಸವರಾಜ ಬೊಮ್ಮಾಯಿ, ಬಸವರಾಜ ಶಿವಣ್ಣನವರ, ಕೆ.ಬಿ. ಕೋಳಿವಾಡ, ಮನೋಹರ ತಹಶೀಲ್ದಾರ್, ಯು.ಬಿ. ಬಣಕಾರ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಸೋಮಣ್ಣ ಬೇವಿನಮರದ, ನಾಗರಾಜ ಛಬ್ಬಿ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement