ಜಾನುವಾರು ಬಗ್ಗೆ ನಿರ್ಲಕ್ಷ್ಯ ಬೇಡ: ಶಿಡೇನೂರು
ಬ್ಯಾಡಗಿ: ಜಾನುವಾರುಗಳ ಬಗ್ಗೆ ನಿರ್ಲಕ್ಷ್ಯ ತೋರಿದರೆ ಕೃಷಿ ಚಟುವಟಿಕೆಯೇ ಸ್ಥಗಿತಗೊಳ್ಳಲಿದೆ ಎಂದು ಎಪಿಎಂಸಿ ಕೃಷಿ ನಿರ್ದೇಶಕ ಎಸ್.ಸಿ. ಶಿಡೇನೂರು ಹೇಳಿದರು. ಹಿರೇನಂದಿಹಳ್ಳಿ ಗ್ರಾಮದಲ್ಲಿ ಸಮಗ್ರ ಜಲಾನಯನ ಯೋಜನೆಯಡಿ ಪಶು ಸಂಗೋಪನೆ ಮತ್ತು ಜಲಾನಯನ ಇಲಾಖೆ ಸಂಯೋಗದಲ್ಲಿ ಜಾನುವಾರು ಆರೋಗ್ಯ ಮತ್ತು ಬರಡುರಾಸು ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿದರು. ಡಾ ನಾಗರಾಜ ಮಾತನಾಡಿ, ಜಾನುವಾರುಗಳಿಗೆ ಲಸಿಕೆಗಳು ಇಲಾಖೆಯಿಂದ ಉಚಿತವಾಗಿ ಲಭ್ಯ. ನಿರ್ಲಕ್ಷ್ಯ ತೋರದೆ ಸಕಾಲದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು. ವದಂತಿಗಳಿಗೆ ಕಿವಿಗೊಡದೆ, ಪಶುವೈದ್ಯರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಶಿಬಿರದಲ್ಲಿ 70 ಬರಡು ಜಾನುವಾರುಗಳಿಗೆ ಚಿಕಿತ್ಸೆ, 280 ಜಾನುವಾರುಗಳಿಗೆ ಗಳಲೆ ರೋಗದ ವಿರುದ್ಧ ಲಸಿಕೆ, ಜಂತು ನಾಶಕ ಮತ್ತು ಖನಿಜ ಮಿಶ್ರಣ ನೀಡಲಾಯಿತು. ಡಾ ಎನ್.ಎಸ್. ಚೌಡಾಳ, ಜಲಾನಯನ ಅಭಿವೃದ್ಧಿ ಅಧಿಕಾರಿ ಎನ್.ವಿ. ಪ್ರಕಾಶ, ಖಂಡಪ್ಪ ನೆಗಳೂರು, ಎನ್.ಎಸ್. ಬಣಕಾರ ಇದ್ದರು.