ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪಿಎಸ್ಐ ಬಂಡೆಗೆ ಶ್ರದ್ಧಾಂಜಲಿ

Rashmi Kasaragodu
Updated On : 19 Jan 2014, 12:13 pm


ರಾಣಿಬೆನ್ನೂರು: ಗುಲ್ಬರ್ಗ ಗುಂಡೇಟಿನಿಂದ ಗಾಯಗೊಂಡು ವೀರಮರಣವನ್ನಪ್ಪಿರುವ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ನಿಧನಕ್ಕೆ ಇಲ್ಲಿನ ಪೋಸ್ಟ್ ಸರ್ಕಲ್ನಲ್ಲಿರುವ ಆಟೋ ಚಾಲಕ ಮಾಲೀಕರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆಟೋ ಚಾಲಕರ ಸಂಘದ ಮುಖಂಡ ಬಸನಗೌಡ ಪಾಟೀಲ ಮಾತನಾಡಿ, ಬಂಡೆಯವರ ಕುಟುಂಬಕ್ಕೆ ದುಃಖವನ್ನು ತಡೆಯುವ ಶಕ್ತಿಯನ್ನು ಆ ಭಗವಂತನ ನೀಡಲೆಂದು ಬೇಡಿಕೊಂಡರು. ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಿತ್ಯಾನಂದ ಜಿ. ಕುಂದಾಪುರ ಮಾತನಾಡಿದರು. ಆಟೋ ಚಾಲಕರ ಸಂಘದ ಸದಸ್ಯ ಹನುಮಂತಪ್ಪ ಯಡಚಿ, ಕೊಟ್ರೇಶ ಬಸವನಕೋಟೆ,ಚಂದ್ರು ಯಡಚಿ, ಮಂಜುನಾಥ ಹೊನ್ನಜ್ಜನವರ, ಶ್ರೀಧರ ರಾಹುತನಕಟ್ಟಿ, ಕರೀಮ್ ಅತ್ತಾರ, ಆನಂದ ನಾಗನೂರು, ನಂದೀಶ ಮುದಕಣ್ಣನವರ, ಸಾದೀಕ್, ಪರಶುರಾಮ ನಾಯ್ಕ, ಖಾಜಾ ನೀಲಗಾರ, ಇಬ್ರಾಹಿಂ ನೀಲಗಾರ, ಎನ್.ಎನ್. ಭೋತೆ ಇದ್ದರು.


ಬಂಡೆ ನಿಧನಕ್ಕೆ ಶ್ರದ್ಧಾಂಜಲಿ


ಹಿರೇಕೆರೂರು: ಸಮಾಜ ಘಾತುಕ ಶಕ್ತಿ ವಿರುದ್ಧ ಸೆಣಸಾಡಿ ಗುಂಡೇಟಿಗೆ ಬಲಿಯಾದ ಗುಲ್ಬರ್ಗದ ಪೊಲೀಸ್ ಸಬ್ಇನ್ಸಪೆಕ್ಟರ್ ಮಲ್ಲಿಕಾರ್ಜುನ ಬಂಡೆ ನಿಧನಕ್ಕೆ ಪಟ್ಟಣದ ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ  ದಲಿತ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು. ಮಲ್ಲಿಕಾರ್ಜುನ ಬಂಡೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದಲಿತ ಮುಖಂಡ ಪ್ರಶಾಂತ ತಿರುಕಪ್ಪನವರ ಮಾತನಾಡಿ, ಜೀವದ ಹಂಗು ತೊರೆದು ರೌಡಿಯನ್ನು ಬಂಧಿಸಲು ಹೋಗಿರುವ ಪಿಎಸ್ಐ ಬಂಡೆ ಅವರ ಮೇಲೆ ರೌಡಿ ಮಾರಣಾಂತಿಕ ಹಲ್ಲೆ ನಡೆಸಿದ್ದು ಖಂಡನೀಯ. ಬಂಡೆ ಅವರು ತೀವ್ರ ಗಾಯಗೊಂಡಾಗ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕಲಿಲ್ಲ. ಇಂಥ ದಿಟ್ಟ ಪೊಲೀಸ್ ಅಧಿಕಾರಿಯನ್ನು ಕಳೆದುಕೊಂಡಿರುವುದು ನಮ್ಮೆಲ್ಲರ ದೌರ್ಭಾಗ್ಯ. ಇಂತಹ ಸಾಹಸ ಪ್ರವೃತ್ತಿಯ ಅಧಿಕಾರಿಗಳು ನಮ್ಮ ನಾಡಿನಲ್ಲಿ ಜನ್ಮ ತಾಳಲಿ ಎಂದು ಆಶಿಸಿದರು. ಮುಖಂಡರಾದ ಭರಮಪ್ಪ ಹರಿಜನ, ಕಾಂತೇಶ ಬಾಲಬಸವನವರ, ಮಾಲತೇಶ ಬೆಟಕೆರೂರ, ಪ್ರವೀಣ ಮುಗಳಿಹಳ್ಳಿ, ಗುತ್ತೇಶ ಕಟ್ಟಿಮನಿ, ಎಂ.ಎಂ. ವಿಜಯ, ಪ್ರಕಾಶ ಕೆಂಪಳ್ಳೇರ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement