ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗೋವು ಆಧಾರಿತ ಕೃಷಿ ಮಾಡಿ: ಪ್ರೊ೤ ನರಸಿಂಹ ಕರೆ

Mainashree
Updated On : 21 Jan 2014, 12:16 pm

ಹಾವೇರಿ: ಭಾರತೀಯ ಸಂಸ್ಕೃತಿ, ಪರಂಪರೆ ಉಳಿಯಬೇಕಿದ್ದರೆ ಗೋವು ಆಧಾರಿತ ಕೃಷಿ ಮಾಡಬೇಕೆಂದು ತುಮಕೂರಿನ ಸಂಸ್ಕೃತ ಪಂಡಿತ, ನಿವೃತ್ತ ಪ್ರಾಂಶುಪಾಲ ನರಸಿಂಹ ಕರೆ ನೀಡಿದರು.
ಹೊಸರಿತ್ತಿ ಗುದ್ದಲೀಶ್ವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ, ಗಿಡಗಳನ್ನು ಬೆಳೆಸುವುದೂ ಅಗತ್ಯವಾಗಿದೆ ಎಂದರು.
ಶ್ರೀಧರಾನಂದ ಸ್ವಾಮೀಜಿ ಸಂಪಾದಿತ 116ನೇ ಕೃತಿ ಅಗ್ನಿ ಪುರಾಣ ಗ್ರಂಥವನ್ನು ಗುದ್ದಲೀ ಶಿವಯೋಗೀಶ್ವರ ಸ್ವಾಮೀಜಿ ಬಿಡುಗಡೆ ಮಾಡಿದರು.
ಗುಡ್ಡದ ಆನ್ವೇರಿಯ ಶಿವಯೋಗಿಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕೂಡಲದ ಗುರುನಂಜೇಶ್ವರ ಮಠದ ಮಹೇಶ ದೇವರು, ಅಗಡಿ ಅಕ್ಕಿಮಠದ ಗುರುಲಿಂಗ ದೇವರು, ದೆಹಲಿಯ ಕಲ್ಯಾಣ ಆಶ್ರಮದ ಮಹಾಂತ ಸ್ವಾಮೀಜಿ, ಋಷಿಕೇಶ ಮಂಗಳಗಟ್ಟಿಯ ಮಹಾಂತ ದೇವರು, ಕುರುಬಗೊಂಡದ ವೇ.ವೀರಭದ್ರಯ್ಯ ಶಾಸ್ತ್ರಿಗಳು, ಹಿರೇಮುಗದೂರಿನ ಕೃಷಿ ಕಾಯಕಯೋಗಿ ಶೇಖಣ್ಣ ಕನವಳ್ಳಿ ಇದ್ದರು. ಸಿದ್ದರಾಜ ಕಲಕೋಟಿ ಸ್ವಾಗತಿಸಿದರು. ಬಿ.ಎಸ್. ಯಾವಗಲ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement