ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಕ್ಕಳ ಭಾವನೆಗೆ ಸ್ಪಂದಿಸಿ: ಗಂಗಾವತಿ ಪ್ರಾಣೇಶ್

Mainashree
Updated On : 21 Jan 2014, 12:11 pm

ಶಿಗ್ಗಾಂವಿ: ನಮ್ಮ ಪ್ರತಿಷ್ಠೆಗಾಗಿ ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿ ಮಾಡದೆ ಅವರ ಭಾವನೆಗಳಿಗೆ ಸ್ಪಂದಿಸಿ. ವೈದ್ಯ, ಎಂಜಿನಿಯರ್ ಮಾಡುವ ಕನಸು ಬಿಟ್ಟು, ಉತ್ತಮ ಕೃಷಿಕರನ್ನಾಗಿ ರೂಪಿಸಿ. ಟೀವಿ ನೋಡುವುದನ್ನು ಕಡಿಮೆ ಮಾಡಿಸಿ, ಓದುವ ಹವ್ಯಾಸ ಬೆಳೆಸಿ. ಕಾಯಕದಲ್ಲಿ 10 ವರ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯ ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಸಂಗನಬಸವ ಮಂಗಲ ಭವನದಲ್ಲಿ ಬೆಂಗಳೂರಿನ ಆಯುಷ್ ಇಲಾಖೆ ಹಾಗೂ ಶಿರಸಿಯ ನಿಸರ್ಗ ಟ್ರಸ್ಟ್ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಆಯುಷ್ ಕಾರ್ಯಾಗಾರ ಉದ್ಘಾಟಿಸಿದ ಅವರು, ದೈಹಿಕ ಶ್ರಮವಿಲ್ಲದ ಹಾಗೂ ಮಾನಸಿಕ ಒತ್ತಡವಿರುವ ಮನುಷ್ಯನಿಗೆ ರೋಗಗಳು ಹೆಚ್ಚುತ್ತಿವೆ. ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ ಶೇ. 60ರಷ್ಟು ಜನರಲ್ಲಿ ಕಂಡುಬರುತ್ತಿದೆ. ನಿತ್ಯ ಎರಡು ಬಾರಿ ಯೋಗಾಸನ, ಸಮತೋಲನ ಆಹಾರ ಸೇವನೆ ಮಾಡಬೇಕು. ಅಡುಗೆಗೆ ಶುದ್ಧ ಎಣ್ಣೆ ಬಳಸಬೇಕು. ಜಂಕ್ ಫುಡ್ ಒಲವು ಬಿಡಬೇಕು ಎಂದು ಸಲಹೆ ನೀಡಿದರು.
ಶಾಸಕ ಬಸವರಾಜ ಬೊಮ್ಮಾಯಿ, ಮನುಷ್ಯನ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಹಾಸ್ಯ ಪೂರಕ. ನಿತ್ಯದ ಬದುಕನ್ನು ವ್ಯಾವಹಾರಿಕವಾಗಿ ಕಳೆಯುತ್ತಿರುವ ನಾವು, ದೈಹಿಕ ಶ್ರಮ ಮರೆಯುತ್ತಿದ್ದೇವೆ. ಆರೋಗ್ಯವಿದ್ದರೆ ಎಲ್ಲ ಭಾಗ್ಯಗಳನ್ನೂ ಪಡೆಯಬಲ್ಲೆವು ಎಂದರು.
ಸಂಗನಬಸವ ಸ್ವಾಮೀಜಿ, ಹಾಸ್ಯ ಕಲಾವಿದ ಬಸವರಾಜ ಮಾಮನಿ ಮಾತನಾಡಿದರು. ತಾಪಂ ಅಧ್ಯಕ್ಷೆ ಸುಜಾತಾ ಕಲಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಬಿಜೆಪಿ ತಾಲೂಕು ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಜಿಲ್ಲಾ ಆಯುಷ್ ಅಧಿಕಾರಿ ಡಾ೤ ಗಣೇಶ ಕಬಾಡಿ, ಜಿಪಂ ಸದಸ್ಯರಾದ ಸಿ.ಎಸ್. ಪಾಟೀಲ, ಬಿ.ಟಿ. ಇನಾಮತಿ, ಶಶಿಧರ ಹೊನ್ನಣ್ಣವರ, ಸರೋಜಾ ಆಡಿನ ಇದ್ದರು.
ಶಿರಸಿ ನಿಸರ್ಗ ಟ್ರಸ್ಟ್ ಅಧ್ಯಕ್ಷ ಡಾ೤ ವೆಂಕಟರಮಣ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಡಾ೤ ಜಿ.ಸಿ. ನಿಡಗುಂದಿ ಸ್ವಾಗತಿಸಿದರು. ಗಂಗಾವತಿ ಪ್ರಾಣೇಶ್, ಬಸವರಾಜ ಮಾಮನಿ ಅವರಿಂದ ನಡೆದ ಹ್ಯಾಸ ರಸಮಂಜರಿ ಕಾರ್ಯಕ್ರಮ ಜನಮನ ರಂಜಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement